ಮನೋರಂಜನೆ

ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಅಜಿಂಕ್ಯಾ ರಹಾನೆ

Pinterest LinkedIn Tumblr

Indian cricketer Ajinkya Rahane celebrates his century during 4t

ಮುಂಬೈ: ಪ್ರಸ್ತುತ ಏಕದಿನ ಹಾಗೂ ಐಪಿಎಲ್ ಗಳಲ್ಲಿ ಸ್ಥಿರ ಆಟ ಪ್ರದರ್ಶಿಸುತ್ತಿರುವ ಭಾರತೀಯ ಆಟಗಾರ ಅಜಿಂಕ್ಯಾ ರಹಾನೆ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿಇಎಟಿ ನೀಡುವ ವರ್ಷದ ಭಾರತೀಯ ಕ್ರಿಕೆಟಿಗ ಪ್ರಶಸ್ತಿಗೆ ಅಜಿಂಕ್ಯಾ ರಹಾನೆಗೆ ಭಾಜರಾದರೆ, ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರಿಗೆ ವರ್ಷದ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಇದೇ ವೇಳೆ ಅಂತರಾಷ್ಟ್ರೀಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ನೀಡಲಾಗಿದೆ.

ಕೊಲ್ಕತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಟ 264 ರನ್ ಗಳಿಸಿದ್ದ ಕ್ರಿಕೆಟಿಗ ರೋಹಿತ್ ಶರ್ಮಾ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರಿಂದ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅಜಿಂಕ್ಯಾ ರಹಾನೆ, ನನ್ನ ಜೀವನದಲ್ಲಿ ಈ ವರ್ಷ ಅತಿ ಮುಖ್ಯವಾದದ್ದು, ದೇಶ ಹಾಗೂ ವಿದೇಶದಲ್ಲಿ ಆಡಿದ ನನಗೆ ಮರೆಯಲಾರದ ಕ್ಷಣಗಳಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಆನಂದಿಸಿದ್ದೆ. ಅದರಲ್ಲು ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ 103 ರನ್ ಸಿಡಿಸಿದ್ದು, ಅವಿಸ್ಮರಣಿಯ ಎಂದರು.

Write A Comment