ಮನೋರಂಜನೆ

ಬೆಚ್ಚಿ ಬೀಳಿಸುವ ಸತ್ಯ: ಈ ಬಾರಿಯ ಐಪಿಎಲ್ ನಲ್ಲಿಯೂ ಫಿಕ್ಸಿಂಗ್ !

Pinterest LinkedIn Tumblr

1603ipl-schedule

ಕ್ರಿಕೆಟ್  ಅಭಿಮಾನಿಗಳ  ನಿದ್ದೆಗೆಡಿಸಿರುವ ಐಪಿಎಲ್ ನಲ್ಲಿ ಈ ಬಾರಿಯೂ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕರ ಮಾಹಿತಿ ಹೊರ ಬಿದ್ದಿದೆ.

2013ರ ಐಪಿಎಲ್ ನಂತೆ ಈ ಬಾರಿಯ ಐಪಿಎಲ್ ನಲ್ಲಿಯೂ ಫಿಕ್ಸಿಂಗ್  ನಡೆದಿದ್ದು ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ದೇಶದ ಹಲವೆಡೆ ದಾಳಿ ನಡೆಸಿ ಸುಮಾರು 5 ಮ್ಯಾಚ್ ಗಳು ಫಿಕ್ಸಿಂಗ್ ಆಗಿವೆ ಎಂಬ ಬಗೆಗಿನ ದಾಖಲೆಯನ್ನು ಕಲೆಹಾಕಿದೆ ಎಂಬ ಮಾಹಿತಿ ಲಭಿಸಿದೆ.

ಈ ಕುರಿತು ಮುಂಬೈ ಮೂಲದ ಪತ್ರಿಕೆಯೊಂದು ವರದಿ ಮಾಡಿದ್ದು, ಜಾರಿ ನಿರ್ದೇಶನಾಲಯ ಮೂಲಗಳೇ ಇದನ್ನು ಖಚಿತಪಡಿಸಿವೆ ಎನ್ನಲಾಗಿದೆ. ಅಲ್ಲದೇ ಸದ್ಯ ಎರಡು ಪಂದ್ಯಗಳ ಕುರಿತಂತೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದ್ದು  ಮುಂಬೈ, ಥಾಣೆ ಹಾಗೂ ಜೈಪುರದಲ್ಲಿ ಇಡಿ ಅಧಿಕಾರಿಗಳು ನಡೆಸಿದ ದಾಳಿ ನಂತರ ಇದು ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭಿಸಿದೆ.

ಕಳೆದ 1 ತಿಂಗಳಿಂದ ಅಧಿಕಾರಿಗಳು ಬುಕ್ಕಿಗಳು, ಆಟಗಾರರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದ್ದು ಮುಂಬೈನ ಎರಡು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಇದರಲ್ಲಿ ಅನಿಲ್ ಜೈಸಿಂಘಾನಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ವಿಶೇಷವೆಂದರೆ ದಾಳಿ ನಡೆಯುತ್ತಿದ್ದಂತೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡ ಆತ ಆಸ್ಪತ್ರೆಗೆ ದಾಖಲಾಗಿದ್ದರೆ ಆತನ  ಪತ್ನಿ ಈತನ ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳನ್ನು ಟಾಯ್ಲೆಟ್ ಗೆ ಹಾಕಿ ನಾಶ ಮಾಡಿದ್ದಾಳೆ ಎನ್ನಲಾಗುತ್ತಿದೆ.

1 Comment

Write A Comment