ಅಪ್ಪಟ ಕನ್ನಡದ ಪ್ರತಿಭೆ ನಿಧಿ ಸುಬ್ಬಯ್ಯ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಒಂದು ಸುತ್ತು ಹಾಕಿ ಬಂದಿದ್ದಾರೆ. ಈಗ ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು ಈ ಚಿತ್ರದಲ್ಲಿ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಪತ್ನಿಯಾಗಿ ನಟಿಸುತ್ತಿದ್ದಾರೆ.
ಇಂದ್ರ ಕುಮಾರ್ ನಿರ್ದೇಶನದ ‘ಗ್ರಾಂಡ್ ಮಸ್ತಿ 3’ ರ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಈ ಚಿತ್ರದಲ್ಲಿ ರಿತೇಶ್ ದೇಶ್ ಮುಖ್ ಜೋಡಿಯಾಗಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಯಭರಿತ ಮನೋರಂಜನಾ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದೆ.
ಈಗಾಗಲೇ ‘ಅಜಬ್ ಗಜಬ್ ಲವ್’ ಹಾಗೂ ‘ಓ ಮೈ ಗಾಡ್’ ಚಿತ್ರದಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ ‘ಗ್ರಾಂಡ್ ಮಸ್ತಿ 3’ ಚಿತ್ರದ ಕುರಿತು ಆಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ತಮ್ಮ ಭಾಗದ ಚಿತ್ರದ ಚಿತ್ರೀಕರಣ ಆರಂಭವಾಗುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.