ಮನೋರಂಜನೆ

ಬಾಹುಬಲಿ ಆಡಿಯೋ ಹಕ್ಕುಗಳು ದಾಖಲೆ ೩ ಕೋಟಿಗೆ ಬಿಕರಿ

Pinterest LinkedIn Tumblr

bahubali

ಬೆಂಗಳೂರು: ಬಹುನಿರೀಕ್ಷಿತ ಎಸ್ ಎಸ್ ರಾಜಮೌಳಿ ಅವರ ‘ಬಾಹುಬಲಿ’ ಚಲನಚಿತ್ರದ ಆಡಿಯೋ ಹಕ್ಕುಗಳನ್ನು ಬೆಂಗಳೂರು ಮೂಲದ ಲಹರಿ ರೆಕಾರ್ಡಿಂಗ್ ಸಂಸ್ಥೆಗೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈ ಒಪ್ಪಂದಕ್ಕೆ ಲಹರಿ ಸಂಸ್ಥೆ ವ್ಯಯಿಸಿರುವ ಹಣ ಬರೋಬರಿ ೩ ಕೋಟಿ. ದಕ್ಷಿಣ ಭಾರತದಲ್ಲಿ ಚಿತ್ರವೊಂದರ ಆಡಿಯೋ ಹಕ್ಕುಗಳಿಗೆ ನೀಡಿರುವ ಅತಿ ದೊಡ್ಡ ಮೊತ್ತ ಇದು ಎಂದು ಬಣ್ಣಿಸಲಾಗಿದೆ.

ಈ ದ್ವಿಭಾಷಾ (ತೆಲುಗು ಮತ್ತು ತಮಿಳು) ಚಿತ್ರದ ನಿರ್ಮಾಣಕ್ಕೆ ಅಂದಾಜಿಸಿರುವ ವೆಚ್ಚ ೨೦೦ ಕೋಟಿ ರುಪಾಯಿ. ಮೇ ೩೧ರಂದು ಹೈದರಾಬಾದಿನಲ್ಲಿ ನಡೆಯಲಿರುವ ವೈಭವಯುತ ಕಾರ್ಯಕ್ರಮದಲ್ಲಿ ಬಾಹುಬಲಿ ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ.

ಲಹರಿ ರಕಾರ್ಡಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಲಹರಿ ವೇಲು ಹೇಳುವಂತೆ ಕಾರ್ಯಕ್ರಮದಲ್ಲಿ ಕನಿಷ್ಠ ೨೫೦೦೦ ಜನ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. “ನನ್ನ ತಮ್ಮ ಜಿ ಮನೋಹರ ನಾಯ್ಡು ಮತ್ತು ಅವರ ಮಗ ಚಂದ್ರು ಈ ಸಿನೆಮಾದ ಆಡಿಯೋ ಹಕ್ಕುಗಳನ್ನು ಖರೀದಿಸಲು ಇತರ ಆಡಿಯೋ ಸಂಸ್ಥೆಗಳೊಂದಿಗೆ ಬಹಳ ಸೆಣಸಬೇಕಾಗಿ ಬಂತು. ನಂತರ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ, ನಿರ್ಮಾಪಕರಲ್ಲಿ ಒಬ್ಬರಾದ ಕೊವೇಲಮುಡಿ ರಾಘವೇಂದ್ರ ರಾವ್ ಮತ್ತು ನಿರ್ದೇಶಕ ರಾಜಮೌಳಿ ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ಇಂತಹ ಸಿನೆಮಾದ ಆಡಿಯೋ ಹಕ್ಕುಗಳನ್ನು ನಮ್ಮದಾಗಿಸಿಕೊಂಡಿದ್ದು ನಮ್ಮಸಂಸ್ಥೆಗೆ ಒಂದು ಮೈಲಿಗಲ್ಲು. ಈ ಸಿನೆಮಾ ಕನ್ನಡದಲ್ಲಿ ನಿರ್ಮಾಣ ಆಗುತ್ತಿಲ್ಲವಾದರೂ ಕರ್ನಾಟಕದವರೇ ಆದ ಎಸ್ ಎಸ್ ರಾಜಮೌಳಿ, ನಟ ಸುದೀಪ್, ನಟಿ ಅನುಷ್ಕಾ ಶೆಟ್ಟಿ ಈ ದೊಡ್ಡ ಬಜೆಟ್ ಸಿನೆಮಾದ ಭಾಗವಾಗಿದ್ದಾರೆ” ಎಂದಿದ್ದಾರೆ ವೇಲು.

Write A Comment