ಮನೋರಂಜನೆ

ಶಾಹಿದ್ ಕಪೂರ್ ತನ್ನ ಭಾವಿ ಪತ್ನಿಗೆ ನೀಡಿದ್ದೇನು ಗೊತ್ತಾ ..?

Pinterest LinkedIn Tumblr

854KrkL9

ವಿದ್ಯಾಬಾಲನ್ ಸೇರಿದಂತೆ ಹಲವು ನಟಿಯರ ಜತೆ ಕೈ ಕೈ ಹಿಡಿದು ಓಡಾಡಿದ್ದ ಶಾಹಿದ್ ಕಪೂರ್  ಇದೀಗ ಮೀರಾ ರಜಪೂತ್  ಜತೆ ಪ್ರೇಮದ ಕಡಲಲ್ಲಿ ಈಜಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ತನ್ನ ಭಾವಿ ಪತ್ನಿ ಮೀರಾಗೆ ಶಾಹಿದ್ ಕಪೂರ್ ಒಂದು ವಿಶೇಷ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಕರೀನಾ ಕಪೂರ್ ಜತೆ ಸಾಕಷ್ಟು ದಿನಗಳ ಕಾಲ ಓಡಾಡಿಕೊಂಡು ಸುದ್ದಿಯಾಗಿದ್ದ ಶಾಹಿದ್ ತಮ್ಮ ನಡುವಿನ ಸಂಬಂಧ ಬಿರುಕು  ಮೂಡಿದ ನಂತರ ಶಾಹಿದ್ ಹೆಸರು ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಮುಂತಾದವರ ಜತೆ ಹರಿದಾಡುತ್ತಿತ್ತು. ಆದರೆ ಇದೀಗ ಮದುವೆಯಾಗುಡೀ ಲೇಸು ಎಂದು ಮೀರಾ ರಜಪೂತ್ ಜತೆ ವಿವಾಹ ಸಂಬಂಧಕ್ಕೆ ಸಿದ್ದತೆ ನಡೆಸುತ್ತಿದ್ದಾನೆ.

ವಿಶೇಷವೆಂದರೆ, ಆಪ್ತ ವಲಯದ ಗೆಳೆಯರಿಗಾಗಿ ಇತ್ತೀಚೆಗೆ ಭರ್ಜರಿ ಪಾರ್ಟಿ ಆಯೋಜಿಸಿದ್ದ ಶಾಹಿದ್ ಅಲ್ಲಿ ತನ್ನ ಭಾವಿ ಪತ್ನಿ ಮೀರಾಗೆ ಬರೋಬ್ಬರಿ 23 ಲಕ್ಷ ರೂಪಾಯಿ ಮೌಲ್ಯದ ವಜ್ರದುಂಗುರ ತೊಡಿಸಿ ಅಚ್ಚರಿ ಮೂಡಿಸಿದ್ದಾನೆ. ಹಾಗಾಗಿ ಮದುವೆಗೆ ಮುನ್ನವೇ ಇಂತಹ ಉಡುಗೊರೆ ನೀಡಿದ ಸಾಹಿದ್ ಮದುವೆಯಾದ ಮೇಲೆ ಏನು ಕೊಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾಳಂತೆ ಮೀರಾ.!

Write A Comment