ಮನೋರಂಜನೆ

ಆ ಚಿತ್ರದಲ್ಲಿ ನಾನಿಲ್ಲವೆಂದ ಬಾಲಿವುಡ್ ಬೆಡಗಿ

Pinterest LinkedIn Tumblr

6945lara_dutta_650_101014041559

ಬಾಲಿವುಡ್ ಬೆಡಗಿ ಲಾರಾ ದತ್ತಾ ‘ಅಭಿ ನಹೀ ತೋ ಕಭಿ ನಹೀ’ ಚಿತ್ರದಲ್ಲಿ ತಾವು ನಟಿಸುವುದಾಗಿ ಹಬ್ಬಿರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಆ ಚಿತ್ರದಲ್ಲಿ ತಾವು ನಟಿಸುತ್ತಿಲ್ಲವೆಂದು ಲಾರಾ ದತ್ತಾ ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ನಟಿಸುವುದನ್ನು ಲಾರಾ ದತ್ತಾ ನಿರಾಕರಿಸಿದ್ದರೂ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಲಾರಾ ದತ್ತಾ, ಪ್ರೇರಣಾ ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಶುಭವಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಮಾಡೆಲಿಂಗ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ 37 ವರ್ಷದ ಲಾರಾ ದತ್ತಾ ವಿವಾಹವಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ‘ಅಭಿ ನಹೀ ತೋ ಕಭಿ ನಹೀ’ ಚಿತ್ರದ ಮೂಲಕ ಅವರು ಮತ್ತೆ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಲಿದ್ದಾರೆಂದು ಹೇಳಲಾಗುತ್ತಿತ್ತಾದರೂ ಇದನ್ನು ನಿರಾಕರಿಸುವ ಮೂಲಕ ಲಾರಾ ದತ್ತಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Write A Comment