ಮನೋರಂಜನೆ

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮರು ಬಿಡುಗಡೆ!

Pinterest LinkedIn Tumblr

yash-radhika

ಬೆಂಗಳೂರು: ಸ್ಯಾಂಡಲ್  ವುಡ್ ನ ಖ್ಯಾತ ತಾರಾ ಜೋಡಿ ಯಶ್  ಮತ್ತು ರಾಧಿಕಾ ಪಂಡಿತ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನೆಮಾ ಭರ್ಜರಿ ಪ್ರದರ್ಶನ ಕಂಡದ್ದು ಹಳೆಯ ಸುದ್ದಿ.

ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಕೂಡ ಚಿತ್ರ ರಸಿಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದರು. ಈಗಲೂ ಕೂಡ ಕೆಲವು ಥಿಯೇಟರ್ ಗಳಲ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಒಡುತ್ತಿದೆ.

ಈಗ ಹೊಸ ವಿಷಯ ಏನೆಂದರೆ, ಈ ವಾರ ಮತ್ತೆ ಸಿನಿಮಾ ಬಿಡುಗಡೆಯಾಗುತ್ತಿದೆ.ಸಿನಿಮಾ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನೆಮಾ ರಾಜ್ಯಾದ್ಯಂತ ಮರು ಬಿಡುಗಡೆಯಾಗಲಿದೆ. ಈ ಮೂಲಕ ಪ್ರೇಕ್ಷಕರ ಖುಷಿಯನ್ನು ಇಮ್ಮಡಿಗೊಳಿಸಲಿದೆ. ರಾಮಾಚಾರಿಗೆ ಚಿಯರ್ಸ್..

Write A Comment