ಮನೋರಂಜನೆ

ಶಿವರಾಜಕುಮಾರ್ ಮಗಳ ಮದುವೆ ಆಗಸ್ಟ್ ೩೧ಕ್ಕೆ

Pinterest LinkedIn Tumblr

Shivanna

ಬೆಂಗಳೂರು: ಕನ್ನಡದ ಮೇರು ನಟ ಶಿವರಾಜ್ ಕುಮಾರ ಅವರ ಪುತ್ರಿ ವೃತ್ತಿಪರ ಡಾಕ್ಟರ್ ನಿರುಪಮಾ, ಡಾಕ್ಟರ್ ದಿಲೀಪ್ ಅವರನ್ನು ಆಗಸ್ಟ್ ೩೧ರಂದು ವರಿಸಲಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.

“ಆಗಸ್ಟ್ ೩೧ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಜುಲೈ ಅಂತ್ಯಕ್ಕೆ ಶಿವರಾಜ್ ಕುಮಾರ್ ಅವರು ಈಗ ಒಪ್ಪಿಕೊಂಡಿರುವ ಸಿನೆಮಾಗಳನ್ನು ಮುಗಿಸಿರುತ್ತಾರೆ. ನಂತರ ಮದುವೆ ಸಿದ್ಧತೆಗಳನ್ನು ನಡೆಸಲಿದ್ದಾರೆ” ಎಂದು ಮೂಲಗಳಿಂದ ತಿಳಿದುಬಂದಿದೆ.

ಸದ್ಯಕೆ ‘ಶಿವಲಿಂಗ’ ಸಿನೆಮಾ ಹಾಗು ರಾಮ ಗೋಪಾಲ್ ವರ್ಮಾ ಅವರ ಬಹುಭಾಷಾ ಚಲನಚಿತ್ರ ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾಗಳಲ್ಲಿ ಶಿವರಾಜ್ ಕುಮಾರ್ ಕಾರ್ಯನಿರತರಾಗಿದ್ದಾರೆ.

ಮಗಳ ಮದುವೆ ಕಾರ್ಯದ ಬಳಿಕ ಸೆಪ್ಟಂಬರ್ ನಲ್ಲಿ ‘ಶ್ರೀಕಂಠ’ ಚಲನಚಿತ್ರದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ತೊಡಗಿಸಿಕೊಳ್ಳಲಿದ್ದಾರೆ.

Write A Comment