ಮನೋರಂಜನೆ

ಸದ್ದಿಲ್ಲದೆ ನಡೆದಿದೆಯೇ ನಯನ್‌ತಾರಾ ಮದುವೆ?

Pinterest LinkedIn Tumblr

vignesh_nayantara

ಕೊಚ್ಚಿ: ಪಂಚಭಾಷಾ ನಟಿ ನಯನ್‌ತಾರಾಗೆ ಮದುವೆ ಆಯ್ತಾ? ಅಭಿಮಾನಿಗಳಲ್ಲಿ ಈ ಪ್ರಶ್ನೆ ಅಚ್ಚರಿ ಮೂಡಿಸಿದೆ. ಕೆಲವೊಂದು ಸುದ್ದಿ ಮೂಲಗಳು ನಯನ್‌ತಾರಾ ಸದ್ದಿಲ್ಲದೆ ಮದುವೆ ಆಗಿದ್ದಾಳೆ ಎಂಬ ಸುದ್ದಿಯನ್ನು ಬಿತ್ತರಿಸಿವೆ.

ಯುವ ನಿರ್ದೇಶಕ ವಿಘ್ನೇಶ್ ಶಿವನ್‌ನ್ನು ನಯನ್‌ತಾರಾ ವರಿಸಿದ್ದಾಗಿ ಸುದ್ದಿ. ಇವರಿಬ್ಬರದ್ದೂ ವಿವಾಹ ನಿಶ್ಚಯ ಆಗಿದ್ದು, ಕೊಚ್ಚಿಯಲ್ಲಿರುವ ಇಗರ್ಜಿಯೊಂದರಲ್ಲಿ ಇಬ್ಬರೂ ಮದುವೆಯಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಇದು ಸುದ್ದಿಯಿಲ್ಲದೆ ನಡೆದ ವಿವಾಹ. ವಿವಾಹದ ಬಗ್ಗೆ ಸಿನಿಮಾ ಇಂಡಸ್ಟ್ರಿಯವರಿಗೂ ಗೊತ್ತಿರಲ್ಲಿಲ್ಲ. ವಿವಾಹ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

ವಿಘ್ನೇಶ್ ನಯನ್‌ತಾರಾಗಿಂತ ವಯಸ್ಸಿನಲ್ಲಿ ಕಿರಿಯವನಾಗಿದ್ದಾನೆ. ವಿಜಯ್ ಸೇತುಪತಿ ಮತ್ತು ನಯನ್ ಜತೆಯಾಗಿ ನಟಿಸುತ್ತಿರುವ ‘ನಾನುಂ ರೌಡಿ ತಾನ್ ‘ ಎಂಬ ಚಿತ್ರ ಸೆಟ್‌ನಲ್ಲಿ ವಿಘ್ನೇಶ್ ಜತೆ ನಯನ್‌ಗೆ ಪ್ರೇಮಾಂಕುರವಾಗಿತ್ತು. ನಾನುಂ ರೌಡಿ ತಾನ್ ಚಿತ್ರದ ನಿರ್ದೇಶಕರಾಗಿದ್ದಾರೆ ವಿಘ್ನೇಶ್.

ಸಿಂಬು ನಾಯಕನಾಗಿದ್ದ ಪೋಡಾ ಪೋಡಿ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ 29ರ ಹರೆಯದ ವಿಘ್ನೇಶ್ ಸಿನಿಮಾರಂಗಕ್ಕೆ ಪ್ರವೇಶಿಸಿದರು. ವೆಲಯಿಲ್ಲಾ ಪಟ್ಟಧಾರಿ ಎಂಬ ಚಿತ್ರದಲ್ಲಿ ವಿಘ್ನೇಶ್ ನಟಿಸಿದ್ದರು.

ಇಷ್ಟೆಲ್ಲಾ ಸುದ್ದಿಯಾಗಿದ್ದರೂ ನಯನ್ -ವಿಘ್ನೇಶ್ ವಿವಾಹದ ಬಗ್ಗೆ ಅಧಿಕೃತ ಮೂಲದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Write A Comment