ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ನಟಿಯರು ತಮ್ಮ ಮಾದಕ ಸೌಂದರ್ಯವನ್ನು ಪ್ರದರ್ಶಿಸುತ್ತಿದ್ದು, ಕತ್ರೀನಾ ಕೈಫ್ ಹಾಗೂ ಮಲ್ಲಿಕಾ ಶೆರಾವತ್ ಬಳಿಕ ಇದೀಗ ಸೋನಂ ಕಪೂರ್ ಮೋಡಿ ಮಾಡಿದ್ದಾರೆ.
ಕೇನ್ಸ್ ನ ರೆಡ್ ಕಾರ್ಪೆಟ್ ಮೇಲೆ ನೀಲಿ ಬಣ್ಣದ ಉಡುಪಿನಲ್ಲಿ ಸೋನಂ ಕಪೂರ್ ನಡೆಯುತ್ತಿದ್ದಂತೆಯೇ ಛಾಯಾಗ್ರಾಹಕರ ಕ್ಯಾಮೆರಾಗಳು ಅವರ ಸೌಂದರ್ಯವನ್ನು ಬಿಡುವಿಲ್ಲದಂತೆ ಸೆರೆ ಹಿಡಿದವು. ಐದನೇ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿರುವ ಸೋನಂ ಕಪೂರ್ ಎಲ್ಲರ ಗಮನ ಸೆಳೆದಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿರುವ 29 ವರ್ಷದ ಈ ಸುಂದರಿ ಸದ್ಯ ಸಲ್ಮಾನ್ ಖಾನ್ ರೊಂದಿಗೆ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಟ ಅನಿಲ್ ಕಪೂರ್ ಪುತ್ರಿಯಾಗಿರುವ ಸೋನಂ ಕಪೂರ್ ತಮ್ಮ ತಂದೆಯಂತೆಯೇ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಬಯಸಿದ್ದಾರೆ.