ಮನೋರಂಜನೆ

ನಿಗೂಢವಾಗಿ ಸಾವನ್ನಪ್ಪಿದ ಉದಯೋನ್ಮುಖ ಯುವ ನಟ

Pinterest LinkedIn Tumblr

9757336892-roonie

ಕೋಲ್ಕತ್ತಾ: ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಉದಯೋನ್ಮುಖ ಯುವ ನಟನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆಯೋ ಅಥವಾ ಯಾರಾದರೂ ಕೊಲೆ ಮಾಡಿ ಎಸೆದಿದ್ದಾರೆಯೋ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಬಂಗಾಳಿ ಟಿ.ವಿ. ಚಾನೆಲ್ ಗಳ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಯುವ ನಟ ರೋನಿ ಚಕ್ರವರ್ತಿಯ ಶವ ಕೋಲ್ಕತ್ತಾದ ಸಂತೋಷಪುರದಲ್ಲಿರುವ ಆತನ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ರೋನಿ ಚಕ್ರವರ್ತಿ ಕೆರೆಯಲ್ಲಿ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ತೆರಳಿದ್ದರೆನ್ನಲಾಗಿದೆ. ಸಂಜೆಯಾದರೂ ವಾಪಾಸ್ ಬರದ ಕಾರಣ ಹುಡುಕಿದ ವೇಳೆ ಕೆರೆಯಲ್ಲಿ ಆತನ ಶವ ಕಂಡು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕೋಲ್ಕತ್ತಾ ಪೊಲೀಸರು ರೋನಿ ಚಕ್ರವರ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ. ರೋನಿ ಚಕ್ರವರ್ತಿ ಕುಟುಂಬದವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ತರುವಂತೆ ಆಗ್ರಹಿಸಿದ್ದಾರೆ.

Write A Comment