ಮನೋರಂಜನೆ

ಇಂಗ್ಲೀಷ್ ಭಾಷೆಯನ್ನು ಚಿಂದಿ ಚಿತ್ರಾನ್ನ ಮಾಡಿದ ನಟಿ..!

Pinterest LinkedIn Tumblr

1713hqdefault

ಹಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಬೇಕೆಂಬ ಕಾರಣಕ್ಕೆ ನಟಿಯೊಬ್ಬಳು ಅವರಂತೆ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಯತ್ನಿಸಿದ್ದು, ಇದರ ವಿಡಿಯೋವನ್ನು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಆಕೆಯನ್ನು ನಗೆಪಾಟಲಿಗೀಡು ಮಾಡುವ ಪ್ರಯತ್ನ ಮಾಡಿದ್ದಾನೆ.

ಪಾಕಿಸ್ತಾನದ ಬಹುತೇಕ ನಟಿಯರು ಭಾರತೀಯ ಚಿತ್ರರಂಗ ಅದರಲ್ಲೂ ಬಾಲಿವುಡ್ ಪ್ರವೇಶಿಸಬೇಕೆಂಬ ಕನಸು ಕಾಣುವುದು ಸಾಮಾನ್ಯವಾಗಿದ್ದು, ಹಲವರು ಈ ಪ್ರಯತ್ನದಲ್ಲಿ ಸಫಲರೂ ಆಗಿ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ ಹೋಗಿದ್ದಾರೆ. ಆದರೆ ಪಾಕಿಸ್ತಾನದ ಮತ್ತೊಬ್ಬ ನಟಿ ಮೀರಾ ಮಾತ್ರ ತಮ್ಮದೇನಿದ್ದರೂ ಹಾಲಿವುಡ್ ಲೆವೆಲ್ ಎಂಬ ಕಾರಣಕ್ಕೆ ಹಾಲಿವುಡ್ ಗೆ ಹಾರಲು ಸಿದ್ದತೆ ನಡೆಸಿದ್ದಾರಂತೆ.

ತಮ್ಮ ಇಂಗ್ಲೀಷ್ ಭಾಷೆಯನ್ನು ಸುಧಾರಿಸುವಕೊಳ್ಳುವ ಸಲುವಾಗಿ ಅವರು ಟಾಕ್ ಷೋ ಒಂದರಲ್ಲಿ ಹಾಲಿವುಡ್ ಶೈಲಿಯಲ್ಲಿ ಮಾತನಾಡಲು ಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ. ಇವರ ಹಾಲಿವುಡ್ ಹಂಬಲ ಕೇಳಿದ ಪಾಕಿಸ್ತಾನಿಯರು ಮಾತ್ರ ಈಕೆ ಇಂಗ್ಲೀಷ್ ಭಾಷೆಯನ್ನು ಕಗ್ಗೊಲೆ ಮಾಡಿದ್ದಾಳೆಂದು ಮುಸಿ ಮುಸಿ ನಗುತ್ತಿದ್ದಾರೆ. ಈಕೆಯ ಇಂಗ್ಲೀಷ್ ಕೇಳಿದವರು ಹಾಲಿವುಡ್ ಇರಲಿ ಬಾಲಿವುಡ್ ಸಹ ಬಲು ದೂರು ಎನ್ನುತ್ತಿದ್ದಾರಂತೆ.

Write A Comment