ಮನೋರಂಜನೆ

ಮದುವೆಗಿಂತ ಡೇಟಿಂಗ್ ಮಾಡುವುದೇ ಬೆಸ್ಟ್ ಎಂದ ಈ ನಟಿ !

Pinterest LinkedIn Tumblr

kan

ನನಗೆ ಮದುವೆಗಿಂತ ಡೇಟಿಂಗ್ ಮಾಡುವುದೇ ಅತ್ಯಂತ ಸುಲಭ ಎಂದೆನಿಸುತ್ತದೆ ಎಂದು ಹೇಳುವ ಮೂಲಕ ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ಅಚ್ಚರಿಗೆ ಕಾರಣರಾಗಿದ್ದಾರೆ.

ಮದುವೆ ವಿಷಯದಲ್ಲಿ ತಮಗೆ ತುಂಬಾ ಗೊಂದಲಗಳಿದ್ದು ಮದುವೆಗೆ ಹೋಲಿಸಿದರೆ ಡೇಟಿಂಗ್ ಅತ್ಯಂತ ಸುಲಭವಾದದ್ದು. ನಮ್ಮ ಸ್ನೇಹಿತರು ಈಗ ವಿಚ್ಛೇದನ ಪಡೆಯುವುದು ಸಾಮಾನ್ಯ ಸಂಗತಿಯಾಗಿದ್ದು ಹಾಗಾಗಿ  ಡೇಟಿಂಗ್ಸೂಕ್ತ ಎಂದೆನಿಸುತ್ತದೆ. ಆದರೆ ನಮ್ಮ ಪೋಷಕರು ತಮ್ಮ ವೈವಾಹಿಕ ಬಾಂಧವ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದರಿಂದ ಒಮ್ಮೊಮ್ಮೆ ಮದುವೆ ಆಗುವುದೇ ಒಳ್ಳೆಯದು ಎಂದೆನಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ತಾವು ಯಾವುದೇ ಯಾವುದೇ ಚಿತ್ರ ಸಿಕ್ಕರೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ಇನ್ನು ಮುಂದೆ  ತನ್ನ ಪಾತ್ರಗಳನ್ನು ತಾನೇ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿರುವ ಕಂಗನಾ ಈಗ ಪರಿಸ್ಥಿತಿ ಬದಲಾಗಿದ್ದು ತನ್ನ ಪಾತ್ರಗಳನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದೇನೆ ಎಂದೂ ತಿಳಿಸಿದ್ದಾರೆ

Write A Comment