ಮನೋರಂಜನೆ

ಫೇಸ್ ಬುಕ್ ನ ‘ಕ್ಯಾಂಡಿ ಕ್ರಶ್’ ಕಿರಿಕಿರಿಯಿಂದ ಪಾರಾಗಲು ಇಲ್ಲಿದೆ ಉಪಾಯ..!

Pinterest LinkedIn Tumblr

ಚ಻ನದಯ

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಬಳಸುತ್ತಿರುವವರಿಗೆ ‘ಕ್ಯಾಂಡಿ ಕ್ರಶ್’ ಗೇಮ್ ಆಡಲು ಸ್ನೇಹಿತರಿಂದ ಪದೇ ಪದೇ ಆಹ್ವಾನ ಬರುವ ಕಾರಣಕ್ಕೆ ಕಿರಿಕಿರಿ ಉಂಟಾಗುತ್ತಿರುತ್ತದೆ. ಈಗ ಇದಕ್ಕೆ ಕಡಿವಾಣ ಹಾಕುವ ಸಮಯ ಬಂದಿದೆ.

‘ಕ್ಯಾಂಡಿ ಕ್ರಶ್’ ರಿಕ್ವೆಸ್ಟ್ ಪದೇ ಪದೇ ಕಳುಹಿಸುವವರನ್ನು ಬ್ಲಾಕ್ ಮಾಡುವ ಬದಲು ಗೇಮ್ ಹಾಗೂ ಆ್ಯಪ್ ಅಳವಡಿಸಿಕೊಳ್ಳುವಂತೆ ರಿಕ್ವೆಸ್ಟ್ ಕಳುಹಿಸುವವರಿಂದ ಮುಕ್ತಿ ಹೊಂದಲು ಈ ಉಪಾಯ ಬಳಸಿದರೆ ಇದರಿಂದ ತಪ್ಪಿಸಿಕೊಳ್ಳಬಹುದು.

ಫೇಸ್ ಬುಕ್ ಖಾತೆಯಲ್ಲಿ ‘ಸೆಟ್ಟಿಂಗ್ಸ್’ ಗೆ ಹೋಗಿ ಅಲ್ಲಿ ಬ್ಲಾಕಿಂಗ್ ಟ್ಯಾಬ್ ಓಪನ್ ಮಾಡಬೇಕು. ಬಳಿಕ ‘ಬ್ಲಾಕ್ ಆ್ಯಪ್ ಇನ್ವೈಟೀಸ್’ ಬಾಕ್ಸ್ ನಲ್ಲಿ ಯಾವ ಸ್ನೇಹಿತರು ಪದೇ ಪದೇ ರಿಕ್ವೆಸ್ಟ್ ಕಳುಹಿಸುತ್ತಾರೋ ಅಂತವರ ಹೆಸರನ್ನು ಟೈಪ್ ಮಾಡಿದರಾಯ್ತು. ಈ ರೀತಿ ಮಾಡುವುದರಿಂದ ‘ಕ್ಯಾಂಡಿ ಕ್ರಶ್’ ರಿಕ್ವೆಸ್ಟ್ ಬರುವುದು ಶಾಶ್ವತವಾಗಿ ನಿಲ್ಲುತ್ತದೆ. ಅದೇ ರೀತಿ ಬ್ಲಾಕಿಂಗ್ ಟ್ಯಾಬ್ ಮೂಲಕ ಹಲವು ಕಿರಿಕಿರಿಯಿಂದ ಬಚಾವಾಗಬಹುದು.

Write A Comment