ಮನೋರಂಜನೆ

ಅಕ್ಷಯ್ ಕುಮಾರ್ ಅವರಿಂದ ಬಹಳಷ್ಟು ಕಲಿತೆ : ಶ್ರುತಿ ಹಾಸನ್

Pinterest LinkedIn Tumblr

sruti

ಅಕ್ಷಯ್ ಕುಮಾರ್ ಅವರ ಬಳಿ ಸಾಕಷ್ಟು ಕಲಿತೆ. ಆತ ಅತ್ಯುತ್ತಮ  ಸಹನಟ. ಅವರಿಂದ ಬಹಳಷ್ಟು ಸಂಗತಿಗಳು ಗೊತ್ತಾಯಿತು. ಈಗ ಗಬ್ಬರ್ ಈಸ್ ಬ್ಯಾಕ್ ಚಿತ್ರಕ್ಕೆ ಸಂಬಂಧ ಪಟ್ಟಂತೆ ಗೇಂ ಲಾಂಚ್ ಮಾಡಿದ್ದೇವೆ. ಇದು ತ್ರೀಡಿ ಬೇಸ್ಡ್ ಗೇಂ. ಈ ಆಟ ಬಹಳ ಆಸಕ್ತಿಕರವಾಗಿದೆ  ಎಂದಿದ್ದಾಳೆ ಶ್ರುತಿ ಹಾಸನ್. ಅಕ್ಷಯ್ ಹಾಗೂ ಶ್ರುತಿ ಅಭಿನಯದ ಗಬ್ಬರ್ ಚಿತ್ರ ಕಳೆದ ವಾರ ಬಿಡುಗಡೆ ಆಯಿತು.
ನನಗೆ ವೀಡಿಯೋ ಗೇಂ ಅಂದ್ರೆ ತುಂಬಾ ಇಷ್ಟ. ವಿರಾಮದ ವೇಳೆಯಲ್ಲಿ ನಾನು ಅವಕಾಶ ಸಿಕ್ಕಾಗಲೆಲ್ಲಾ ವೀಡಿಯೋ ಗೇಂ ಆಡುತ್ತೇನೆ. ಸಿನಿಮಾದಲ್ಲೂ ಸಹಿತ ಗೇಂನಂತೆ ಯಶಸ್ಸು ಪಡೆಯ ಬೇಕು ಎನ್ನುವ ಆಶಯ ಹೊಂದಿದ್ದೇನೆ ಎಂದಿದ್ದಾಳೆ ಶ್ರುತಿ.

ಸಂಜ ಲೀಲಾ ಭನ್ಸಾಲಿ , ವಯೋಕಾಂ 18  ಪಿಕ್ಚರ್ಸ್ ಮತ್ತು ಸಬೀನ ಖಾನ್ ಒಟ್ಟಾಗಿ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ತಮಿಳು ಚಿತ್ರ ರಮಣ ರೀಮೇಕ್. ತೆಲುಗಿನಲ್ಲಿ ಠಾಗೂರ್ ಹೆಸರಲ್ಲಿ ರೀಮೇಕ್  ಆಗಿತ್ತು.

Write A Comment