ಮನೋರಂಜನೆ

ಸಲ್ಮಾನ್ ಖಾನ್ ಜಾಮೀನು ವಜಾಗೆ ಸುಪ್ರೀಮ್ ಕೋರ್ಟ್ ಮೊರೆ

Pinterest LinkedIn Tumblr

Salman_verdict

ನವದೆಹಲಿ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ನೀಡಿರುವ ಮಂಧ್ಯಂತರ ಜಾಮೀನನ್ನು ವಜಾ ಮಾಡುವಂತೆ ಮುಂಬೈ ವಕೀಲ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದಾರೆ.

ಅರ್ಜಿದಾರ ಅಖಿಲೇಶ್ ಚೌಬೆ ಅವರಿಗೆ ವಾದ ಮಾಡಿದ ವಕೀಲ ವಿ ಮಿಶ್ರಾ ಈ ಮನವಿಯನ್ನು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಒಳಗೊಂಡ ಅಪೆಕ್ಸ್ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದಾರೆ.

ಸಲ್ಮಾನ್ ಅವರ ಜಾಮೀನನ್ನು ವಜಾ ಮಾಡಿ ಮುಂದಿನ ಕೋರ್ಟ್ ಕ್ರಮವಾಗಿ ಅವರ ಪ್ರಕರಣ ವಿಚಾರಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಬಾಂಬೆ ಹೈಕೋರ್ಟ್ ಬುಧವಾರ ಸಲ್ಮಾನ್ ಅವರಿಗೆ ನೀಡಿರುವ ಮಧ್ಯಂತರ ಜಾಮೀನಿನ ಕಾರಣಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಸೂಚನೆ ನೀಡಬೇಕೆಂದು ಕೂಡ ಅರ್ಜಿದಾರರು ಮನವಿ ಮಾಡಿದ್ದಾರೆ.

ನೆನ್ನೆ ಸೆಷನ್ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಐದು ವರ್ಷದ ಕಠಿಣ ಸಜೆಗೆ ಗುರಿ ಮಾಡಿತ್ತು. ಆದರೆ ನೆನ್ನೆ ಸಂಜೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು.
-ಕನ್ನಡಪ್ರಭ

Write A Comment