ಮನೋರಂಜನೆ

ಅವಕಾಶ ಕೊಟ್ಟರೆ ಕೋಚ್ ಆಗುವೆ: ರಾಹುಲ್ ದ್ರಾವಿಡ್

Pinterest LinkedIn Tumblr

Rahul-Dravid

ನವದೆಹಲಿ: ಟೀಂ ಇಂಡಿಯಾದ ಕೋಚ್ ಡಂಕನ್ ಫ್ಲೆಚರ್ ಅವರ ಗುತ್ತಿಗೆ ಅವಧಿ ಮೇ ತಿಂಗಳಲ್ಲಿ ಮುಗಿಯಲಿದ್ದು, ಆ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಈಗಾಗಾಲೇ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರವಿ ಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿ ಬಂದಿದೆ.

ಏತನ್ಮಧ್ಯೆ, ಕೋಚ್ ಆಗಲು ಟೀಂ ಇಂಡಿಯಾ ಸಅವಕಾಶ ನೀಡಿದರೆ ನಾನು ಅದನ್ನು ಸ್ವೀಕರಿಸುವೆ ಎಂದು ರಾಜಸ್ತಾನ್ ರಾಯಲ್ಸ್ ತಂಡದ ಸಲಹೆಗಾರ ರಾಹುಲ್  ದ್ರಾವಿಡ್ ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ಟೀಂ ಇಂಡಿಯಾದ ಕೋಚ್‌ಗಳಾಗಿ ವಿದೇಶಿಗಳನ್ನೇ ನೇಮಕ ಮಾಡಲಾಗುತ್ತಿದೆ.  ಜಾನ್ ರೈಟ್, ಗ್ರೆಗ್ ಚಾಪೆಲ್, ಗ್ಯಾರಿ ಕ್ರಿಸ್ಟನ್ ಮತ್ತು ಡಂಕನ್ ಫ್ಲೆಚರ್ ಮೊದಲಾದವರು ಈ ಸ್ಥಾನಗಳನ್ನು ವಹಿಸಿದ್ದರು. ಈಗ ಭಾರತೀಯನೊಬ್ಬನಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಈ ಹಿಂದೆ ತನಗೆ ಫುಲ್ ಟೈಮ್ ಕೆಲಸದಲ್ಲಿ ತೊಡಗಿಸಿ ಕೊಳ್ಳಲು ಇಷ್ಟವಿಲ್ಲ ಎಂದು ರಾಹುಲ್ ಹೇಳಿದ್ದರು.

Write A Comment