ಮನೋರಂಜನೆ

ಅಮೀರ್ ಖಾನ್ ರ ಮಡದಿಯಾಗ್ತಾಳಂತೆ ಮಲ್ಲಿಕಾ ಶೆರಾವತ್ !

Pinterest LinkedIn Tumblr

9689Aamir-Khan-wife

ಬಾಲಿವುಡ್ ನ ಬಹುಬೇಡಿಕೆಯ ನಟ ಆಮೀರ್ ಖಾನ್ ಇದೀಗ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಜತೆ ರೋಮ್ಯಾನ್ಸ್ ಮಾಡಲು ಮುಂದಾಗಿದ್ದು ಬಾಲಿವುಡ್ ಮಂದಿಯ ಅಚ್ಚರಿಗೆ ಕಾರಣವಾಗಿದೆ.

ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಕಾಣಿಸಿಕೊಳ್ಳಲಿದ್ದು ಆಮೀರ್ ಖಾನ್ ಪತ್ನಿಯ ಪಾತ್ರಕ್ಕೆ ಮಲ್ಲಿಕಾ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಈ ಚಿತ್ರದಲ್ಲಿ ಆಮೀರ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಲು ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ಅವರೇ ಮಲ್ಲಿಕಾ ಶೆರಾವತ್ ಅವಳನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲು ಮನಸ್ಸು ಮಾಡಿದ್ದು ಅಮೀರ್ ಮಲ್ಲಿಕಾ ಜೋಡಿ ಯಾವ ರೀತಿ ಯಶಸ್ಸು ಕಾಣಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.
-ಕನ್ನಡ ದುನಿಯಾ

Write A Comment