ಮನೋರಂಜನೆ

ನೇಪಾಳ ಭೂಕಂಪದ ಬರಹ ಪ್ರಚಾರಕ್ಕಲ್ಲ: ಟೀಕಾಕಾರರ ವಿರುದ್ಧ ಅಮಿತಾಬ್‌ ಕೆಂಡ

Pinterest LinkedIn Tumblr

amith

ಮುಂಬಯಿ: ಸಾಮಾನ್ಯವಾಗಿ ಶಾಂತವಾಗಿ ಪ್ರತಿಕ್ರಿಯಿಸುವ ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌, ನೇಪಾಳ ಭೂಕಂಪ ಸಂತ್ರಸ್ತರ ಪರ ತನ್ನ ಅನುಕಂಪದ ಬರಹಗಳಿಗೆ ಬಂದ ಟೀಕೆಗೆ ಕೆರಳಿ ಕೆಂಡವಾಗಿದ್ದಾರೆ.

ನೇಪಾಳ ಭೂಕಂಪದ ಹಿನ್ನೆಲೆಯಲ್ಲಿ ಟ್ವಿಟ್ಟರ್‌, ಫೇಸ್‌ಬುಕ್‌ ಹಾಗೂ ಬ್ಲಾಗ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ 72 ವರ್ಷದ ಹಿರಿಯ ನಟ ಬರೆದ ಬರಹಗಳಿಗೆ ಕೆಲವರು ಇದು ಪ್ರಚಾರದ ಗಿಮಿಕ್‌ ಎಂದು ಟೀಕಿಸಿದ್ದಾರೆ. ಈ ಟೀಕೆ ಅಮಿತಾಬ್‌ ಬಚ್ಚನ್‌ರನ್ನು ಕ್ರುದ್ಧರಾಗಿಸಿದೆ.

ಟೀಕೆ ಮತ್ತು ಸಹಾನೂಭೂತಿಯ ಮೂಲಕ ಅಗ್ಗದ ಪ್ರಚಾರಕ್ಕಾಗಿ ನಾನು ಬರೆಯುತ್ತಿದ್ಧೇನೆ ಎಂದು ಕೆಲವರು ದೂರುತ್ತಾರೆ. ಈಡಿಯೆಟ್ಸ್! ಅವರನ್ನು ಸುದೀಘ ತನಿಖೆಗಾಗಿ ಸುರಂಗದೊಳಗೆ ಕಳುಹಿಸಬೇಕು. ಮತ್ತು ಅವರ ಒಳಗನ್ನು ವರ್ಣಮಯಗೊಳಿಸಲು ದುರ್ವಾಸನೆಯ ಕೆಸರಲ್ಲಿ ಕೊಳೆಯಿಸಬೇಕು ಎಂದು ತಮ್ಮ ಬ್ಲಾಗ್‌ನಲ್ಲಿ ಸಿಟ್ಟು ತೋಡಿಕೊಂಡಿದ್ಧಾರೆ.

ನನ್ನನ್ನು ಅಧೀರಗೊಳಿಸಿದ ಪ್ರಕೃತಿಯ ವಿಕೋಪದಿಂದ ನೊಂದವರಿಗೆ ನನ್ನ ಶಕ್ತಿಯ ಮಿತಿಯಲ್ಲಿ ಏನು ಮಾಡಬಹುದು ಎಂದು ನಾನು ಚಿಂಚಿಸುತ್ತಿದ್ದರೆ ಕೆಲವು ಮಾಧ್ಯಮಗಳಲ್ಲಿ ಕೆಲವರು ಇನ್ನೇನೋ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ನಾನು ಬರೆಯುತ್ತಿರುವ ಪದಗಳು ಕಠಿಣ ಎಂದು ಎಂಬ ಅವರಿದೆ. ಆದರೆ ತನ್ನ ಘನ ಉದ್ದೇಶವನ್ನು ಪ್ರಚಾರದ ಗಿಮಿಕ್‌ ಎನ್ನುವವರನ್ನು ಸರಿಪಡಿಸಲು ಅಂಥ ಪದಗಳ ಅಗತ್ಯವಿದೆ ಎಂದು ಬಚ್ಚನ್‌ ಪ್ರತಿಪಾದಿಸಿದ್ದಾರೆ.

ನಾನು ನನ್ನ ಪದಗಳ ಮೂಲಕ ಅಸಹನೆಯನ್ನು ವ್ಯಕ್ತಪಡಿಸಿದ್ದೇನೆ. ಅದಕ್ಕಾಗಿ ಕ್ಷಮೆ ಯಾಚಿಸುವೆ. ನಾನು ಏನಕ್ಕೆ ಹಾಗೆ ಮಾಡಿದ್ದೇನೆ ಎನ್ನುವುದನ್ನು ಪ್ರತಿಪಾದಿಸಲು ನಾನು ಹಿಂಜರಿಯಲ್ಲ. ಹಾಗೂ ನನ್ನ ಕೋಪವನ್ನು ಪ್ರಕಟಿಸಲು ಪದಗಳನ್ನು ಹಿಂದೇಟು ಹಾಕಲ್ಲ. ಖಂಡಿತ ಅದು ಸರಿಯಲ್ಲ. ಅದು ಸ್ವಯಂನಾಶವೇ ಸರಿ. ನಾನು ಹಾಗಿಲ್ಲ. ಹಾಗಿದ್ದಿದ್ದೂ ಇಲ್ಲ. ನಾನು ಕ್ಷಮಿಸುವುದೂ ಇಲ್ಲ, ಮರೆಯುವುದೂ ಇಲ್ಲ ಎಂದು ಬ್ಲಾಗ್‌ನಲ್ಲಿ ಬಚ್ಚನ್‌ ಬರೆದುಕೊಂಡಿದ್ದಾರೆ.
-ವಿಜಯ ಕನಾಱಟಕ

Write A Comment