ಮನೋರಂಜನೆ

ನನ್ನ ಪೋಷಕರಂತೆ ಪ್ರದರ್ಶನ ನೀಡುವುದು ಅಸಾಧ್ಯ: ಶೃತಿ ಹಾಸನ್

Pinterest LinkedIn Tumblr

Shruti-Haasan

ಮುಂಬೈ: ತನ್ನ ತಂದೆ-ತಾಯಿಯೊಂದಿಗಿನ ಹೋಲಿಕೆಗೆ ಬೇಸತ್ತಿರುವ ನಟಿ ಶೃತಿ ಹಾಸನ್ ತನ್ನ ಪೋಷಕರಂತೆ(ಕಮಲ ಹಾಸನ್ ಮತ್ತು ಸರಿಕಾ) ಪ್ರದರ್ಶನ ನೀಡುವುದು ಅಸಾಧ್ಯ ಎಂದಿದ್ದಾರೆ.

ಈ ಜೋಡಿ ಸಂಗಾತಿಗಳೊಂದಿಗಿನ ಹೋಲಿಕೆಗೆ ತಾವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬ ಪ್ರಶ್ನೆಗೆ “ನನ್ನ ತಂದೆ-ತಾಯಿಯಂತೆ ನಟಿಸಲು ನನಗೆ ಅಸಾಧ್ಯ. ಅಪ್ಪ ಮಗಳೆ ಆಗಲೀ ಬೇರೆ ಯಾರೇ ಆಗಲಿ ಹೋಲಿಕೆ ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ಗುಣಮಟ್ಟ ಇರುತ್ತದೆ” ಎನ್ನುತ್ತಾರೆ ಶೃತಿ. “ನನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ನಾನು ಕಮಲಾ ಹಾಸನ್ ಪುತ್ರಿ ಎಂದು ಜನ ನನ್ನು ಸಿನೆಮಾಗಳಿಗೆ ಆಯ್ಕೆ ಮಾಡಿದರು. ಆದರೆ ಸಿನೆಮಾ ಸೋತಾಗ ನಿಮ್ಮ ಜೊತೆಗೆ ಯಾರೂ ಇರುವುದಿಲ್ಲ. ನೀವೊಬ್ಬರೇ ಗುದ್ದಾಡಬೇಕು” ಎಂದು ಕೂಡ ಅವರು ತಿಳಿಸಿದ್ದಾರೆ.

ಶೃತಿ ಅವರ ಇತ್ತೀಚಿನ ಸಿನೆಮಾ ‘ಗಬ್ಬರ್ ಈಸ್ ಬ್ಯಾಕ್’ ಶುಕ್ರವಾರ ತೆರೆ ಕಂಡಿದೆ. “ಸಿನೆಮಾದ ವಿಷಯ ವಿಭಿನ್ನವಾಗಿರುವುದರಿಂದ ನನಗೆ ಸಂತಸವಾಗಿದೆ. ಇದು ಭ್ರಷ್ಟಾಚಾರದ ಬಗೆಗಿನ ಸಿನೆಮಾ, ಇಲ್ಲಿ ಪಾತ್ರಗಳನ್ನು ವಿಭಿನ್ನವಾಗಿ ನಿರ್ವಹಿಸಲಾಗಿದೆ” ಎಂದಿದ್ದಾರೆ.

ಕ್ರಿಶ್ ನಿರ್ದೇಶನದ ‘ಗಬ್ಬರ್ ಇಸ್ ಬ್ಯಾಕ್’ ಚಲನಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ಮತ್ತು ವೈಕಂ ೧೮ ಮೋಶನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿದೆ. ೨೦೦೨ರ ತಮಿಳು ಚಿತ್ರ ರಮಣಾದ ರಿಮೇಕ್ ಇದಾಗಿದ್ದು, ಕರೀನಾ ಕಪೂರ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ.
-ಕನ್ನಡ ಪ್ರಭ

Write A Comment