ಮನೋರಂಜನೆ

ಮಂಕಾದ ಮಾಸ್ ಆಟಗಾರರು :ಮಿಂಚುತ್ತಿರುವ ಹೊಸ ಪ್ರತಿಭೆಗಳು

Pinterest LinkedIn Tumblr

IPL-New-Players

ಐಪಿಎಲ್ ಎಂಬ ಮಹಾಯಾತ್ರೆಯ  ಮೂಲಕ  ಕೋಟಿ ಕೋಟಿ ಹಣವನ್ನು ಕಿಸೆಗಿಳಿಸಿಕೊಂಡರು ಹೇಳಿಕೊಳ್ಳುವಂತಹ ಸಾಮರ್ಥ್ಯದ ಆಟವನ್ನು ಪ್ರದರ್ಶಿಸಲು ಅತಿರಥ ಮಹಾರಥರು ಎಡುವುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಂತ್ರಿಕತೆಯಿಂದ ಐಪಿಎಲ್‌ನ ರಂಗನ್ನೇ ಬದಲಾಯಿಸುವುದರಲಿ ಕ್ರಿಕೆಟ್‌ನಲ್ಲಿ ಅಂಬೆಗಾಡುತ್ತಿರುವ  ಶರ್ಫಾಜನ್‌ಖಾನ್ , ಶ್ರೇಯಾಸ್ ಐಯ್ಯರ್, ಯಜುವೇಂದ್ರ  ಚಾಹಲ್‌ರ ಸಮೀಪವು ತಲುಪುದಿರುವುದು ಕೂಡ  ತಮ್ಮ ನೆಚ್ಚಿನ ಆಟಗಾರನ ಆರ್ಭಟ ಆಟದ ಸವಿಯನ್ನು

ಆನಂದಿಸುವ ಕನಸು ಹೊತ್ತಿದ್ದ  ಕ್ರಿಕೆಟ್ ಪ್ರೇಮಿಗಳು ಕೂಡ ಭಾರಿ ನಿರಾಸೆಯನ್ನೇ ಅನುಭವಿಸಿದ್ದಾರೆ.  ಐಪಿಎಲ್‌ನ ಬಿಡ್ಡಿಂಗ್‌ನಲ್ಲಿ 16 ಕೋಟಿಗಳನ್ನು ಜೇಬಿಗೇರಿಸಿಕೊಂಡೇ ಡೆಲ್ಲಿಡೇರ್‌ಡೆವಿಲ್ಸ್ ತಂಡದ ಪಾಲಾಗಿರುವ ಸಿಕ್ಸರ್‌ಗಳ ಮಹಾರಾಜ ಯುವರಾಜ್‌ಸಿಂಗ್ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯವನ್ನೇ ಕಂಡಿದ್ದು ಹಿಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಪರ ತೋರಿದ ಕಳಪೆ ಪ್ರದರ್ಶನವನ್ನೇ ಮುಂದುವರೆಸಿ ತಂಡದ  ಫ್ರಾಂಚೈಸಿಗೆ ತಲೆನೋವಾಗಿ ಪರಿಣಮಿಸಿದೆ.  ಇದುವರೆಗೂ ಆಡಿರುವ 7 ಪಂದ್ಯಗಳಿಂದ 17.71ರ ಸರಾಸರಿ 124 ಮಾತ್ರ ಗಳಿಸಿದ್ದಾರೆ.

ದಿನೇಶ್‌ಕಾರ್ತಿಕ್:
ದೊಡ್ಡ ಹೊಡೆತಗಳಿಗೆ ಹೆಸರಾಗಿರುವ ಯುವರಾಜ್‌ಸಿಂಗ್‌ರ ಕೊರತೆಯನ್ನು ನೀಗಿಸಲೆಂದು  ದಿನೇಶ್‌ಕಾರ್ತಿಕ್‌ಗೆ 10.5 ಕೋಟಿ ನೀಡಿ ಲಿಡ್ಕರ್ ದೊರೆ ವಿಜಯ್‌ಮಲ್ಯ ಆರ್‌ಸಿಬಿ ತಂಡಕ್ಕೆ ಬಿಕರಿ ಮಾಡಿಕೊಂಡರೂ ಕೂಡ ದಿನೇಶ್ ಕಾರ್ತಿಕ್ ತಮ್ಮ ಎಂದಿನ ಸ್ಫೋಟಕ ಆಟವನ್ನು ಮರೆತಂತೆ ಆಡುತ್ತಿದ್ದಾರೆ.  ಆದರೆ ಕಾರ್ತಿಕ್‌ರ ಅದೃಷ್ಟ ಕೈ ಹಿಡಿದಿದೆ. ತಂಡದಲ್ಲಿ ಎಬಿಡಿವಿಲಿಯರ್ಸ್‌ರಂತಹ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ  ವಿಕೆಟ್‌ಕೀಪರ್ ಇದ್ದರೂ ಕೂಡ   ತಂಡಕ್ಕೆ ವಿಕೆಟ್‌ಕೀಪರ್ ರೂಪದಲ್ಲಿ ಅನಿವಾರ್ಯವಾಗಿದ್ದಾರೆ.  ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿಡೇರ್ ಡೆವಿಲ್ಸ್ ತಂಡದಲ್ಲಿದ್ದಾಗ  ಆಗಾಗ  ತನ್ನ ಬ್ಯಾಟಿಂಗ್‌ನಿಂದ ಸದ್ದು ಮಾಡಿ ತಂಡಕ್ಕೆ ಗೆಲುವು  ತಂದುಕೊಟ್ಟಿದ್ದರು. ಆದರೆ ಈ  ಬಾರಿ 7 ಪಂದ್ಯಗಳ 5 ಇನ್ನಿಂಗ್ಸ್‌ನಿಂದ ಕೇವಲ 70 ರನ್‌ಗಳನ್ನು ಮಾತ್ರ ಗಳಿಸಿ  ರನ್ ಬರ ಎದುರಿಸುತ್ತಿದ್ದಾರೆ.

ಎಂಜಲೋಮ್ಯಾಥ್ಯೂಸ್:
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ  ಅಲೌಂಡರ್ ಆಗಿರುವ ಎಂಜಲೋ ಮ್ಯಾಥ್ಯೂಸ್ 7.50 ಕೋಟಿ ಮೊತ್ತವನ್ನು ಕಿಸೆಗೆ ಏರಿಸಿಕೊಂಡು ಡೆಲ್ಲಿಡೇರ್ ಡೆವಿಲ್ಸ್ ಪಾಲಾಗಿದ್ದರೂ ಈ ಬಾರಿಯ ಐಪಿಎಲ್‌ನಲ್ಲಿ  ತಮ್ಮ ನೈಜ ಆಟ ಪ್ರದರ್ಶಿಸಲು ಎಡವಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲೂ ಎಂದಿನ ಮೊನಚನ್ನು ಕಳೆದುಕೊಂಡು ನಾಯಕ ಜೆ.ಪಿ.ಡುಮಿನಿಗೆ ದೊಡ್ಡ ತಲೆನೋವಾಗಿದ್ದಾರೆ. ಆಡಿರುವ 6 ಪಂದ್ಯಗಳಿಂದ  93 ರನ್‌ಗಳನ್ನು ಹಾಗೂ 5 ವಿಕೆಟ್‌ಗಳನ್ನು ಮಾತ್ರ ಕೆಡವಿದ್ದಾರೆ. ಆದರೆ ತಂಡದಲ್ಲಿರುವ ಯುವ ಆಟಗಾರ ಶ್ರೇಯಸ್ ಐಯ್ಯರ್‌ರಂತೆ ಮಿಂಚಲು ಸಾಧ್ಯವಾಗಿಲ್ಲ.

ಅಮಿತ್‌ಮಿಶ್ರಾ:
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ವೇಗದ ಬೌಲರ್‌ಗಳನ್ನು ಹಿಂದಿಕ್ಕುವಂತೆ ಬೌಲಿಂಗ್ ಮಾಡುತ್ತಿರುವ ಲೆಗ್‌ಸ್ಪಿನ್ನರ್‌ಗಳು  ಎದುರಾಳಿ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಮಿಂಚದಂತೆ ಕಾಡಿದ್ದಾರೆ. ಆದರೆ ಮಿಶ್ರಾ 2010 (17 ವಿಕೆಟ್) ಹಾಗೂ 2011(19 ವಿಕೆಟ್)ರ ಐಪಿಎಲ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದಂತೆ ಈ ಬಾರಿ ಐಪಿಎಲ್‌ನಲ್ಲಿ  ಮಿಂಚದಿರುವುದು ಡೆಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಈ  ಬಾರಿಯ ಐಪಿಎಲ್‌ನಲ್ಲಿ ಆಡಿರುವ 7 ಪಂದ್ಯಗಳಿಂದ ಕೇವಲ 6 ವಿಕೆಟ್‌ಗಳನ್ನು ಮಾತ್ರ ಮಿಶ್ರಾ ಕೆಡವಿರುವುದನ್ನು ನೋಡಿದರೆ ಅವರ ಬೌಲಿಂಗ್ ಮಿಂಚು ಕಳೆದುಕೊಂಡಿದ್ದಾರೆ ಎಂದೇ ಹೇಳಬಹುದು.

ಮುರಳಿ ವಿಜಯ್:
ಕಿಂಗ್ಸ್ ಇಲೆವೆನ್ ಪಂಜಾಬ್ ಪರ  ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರಸೆಹ್ವಾಗ್‌ರೊಂದಿಗೆ  ಇನ್ನಿಂಗ್ಸ್ ಆರಂಭಿಸುತ್ತಿರುವ ಮುರಳಿಯ ಬ್ಯಾಟಿಂಗ್ ಮೋಡಿಗೆ ಎದುರಾಳಿ  ಬೌಲರ್‌ಗಳು ಧೂಳಿಪಟವಾಗುವ ಬದಲು ಅವರೇ  ರನ್ ಬರವನ್ನು ಎದುರಿಸುತ್ತಿದ್ದಾರೆ.  ಈ ಹಿಂದೆ ಡೆಲ್ಲಿಡೇರ್ ಡೆವಿಲ್ಸ್ ಹಾಗೂ  ಚೆನ್ನೈ ಸೂಪರ್ ಕಿಂಗ್ಸ್‌ನ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದ ಮುರಳಿ ಈ ಬಾರಿ ಆಡಿರುವ  7 ಪಂದ್ಯಗಳಿಂದ 158 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಐಪಿಎಲ್ ಬಿಡ್ಡಿಂಗ್‌ನಲ್ಲಿ  3 ಕೋಟಿಗೆ ಬಿಕರಿಯಾಗಿರುವ ಮುರಳಿವಿಜಯ್‌ರ ಕೆಟ್ಟ  ಪ್ರದರ್ಶನವನ್ನು ಕಂಡು ತಂಡದ ಮಾಲಕಿ ಗುಳಿಕೆನ್ನೆಯ ಚೆಲುವೆ ಪ್ರೀತಿಜಿಂಟಾ  ಮೊಗದಲ್ಲೂ ಚಿಂತೆ ಕಾಡುವಂತಾಗಿದೆ.

ಡೆರೆನ್ ಸ್ಯಾಮಿ:
ಕೆರಿಬಿಯನ್ ನಾಡಿನ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ನಾಯಕ ಡೆರೆನ್ ಸ್ಯಾಮಿ ಅವರು 2.80 ಕೋಟಿ ಭರ್ಜರಿ ಗಂಟಿನೊಂದಿಗೆ ಲಿಡ್ಕರ್ ದೊರೆ ವಿಜಯ್‌ಮಲ್ಯ ನಾಯಕತ್ವದ ರಾಯಲ್‌ಚಾರ್ಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದರೂ ಕೂಡ ಆಡಿದ 2 ಪಂದ್ಯಗಳಿಂದ  ಎಂಡಂಕಿ ಮೊತ್ತವನ್ನು ದಾಖಲಿಸಲು ಎಡವಿದ್ದಾರೆ. ಇವರೇ ಅಲ್ಲದೆ ಕಳೆದ ಬಾರಿ ತಾವು ಪ್ರತಿನಿಧಿಸಿದ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರ ಫಲವಾಗಿ ಮತ್ತೆ ಆ  ತಂಡದಲ್ಲೇ ಸ್ಥಾನ ಪಡೆದಿರುವ  ಸನ್‌ರೈಸರ್ಸ್ ಹೈದ್ರಾಬಾದ್‌ನ ಮುಂಚೂಣಿ ಬೌಲರ್ ಡೇಲ್ ಸ್ಟೇನ್ (12.80 ಕೋಟಿ)ಎದುರಾಳಿ ಬ್ಯಾಟ್‌ಮನ್‌ಗಳಿಗೆ ಲಗಾಮು ಹಾಕುವಲ್ಲಿ ಎಡವಿದ್ದಾರೆ. ಐಪಿಎಲ್ 8 ರಲ್ಲಿ ಆಡಿರುವ 3 ಪಂದ್ಯಗಳಿಂದ 3 ವಿಕೆಟ್‌ಗಳನ್ನು ಮಾತ್ರ ಕೆಡವಿದ್ದಾರೆ.

ಡೇವಿಡ್ ಮಿಲ್ಲರ್:

ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್‌್ ಮನ್ ಡೇವಿಡ್ ಮಿಲ್ಲರ್ 12.5 ಕೋಟಿಗೆ  ಐಪಿಎಲ್ 7ರಲ್ಲಿ ಕಾಣಿಸಿಕೊಂಡಿದ್ದ ಕಿಂಗ್ಸ್   ಇಲೆವೆನ್ ತಂಡದ ಪರವೇ ಆಡಿದರೂ ದೊಡ್ಡ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸಲು ಹಾಗೂ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲು ಎಡವಿದ್ದಾರೆ. ಇದುವರೆಗೂ ಆಡಿರುವ 6 ಪಂದ್ಯಗಳಿಂದ ಒಂದು ಅರ್ಧಶತಕ ಸೇರಿದಂತೆ 20.66 ರ ಸರಾಸರಿ 124 ರನ್‌ಗಳನ್ನಷ್ಟೇ ಮಿಲ್ಲರ್ ಶಕ್ತರಾಗಿದ್ದಾರೆ. ಈ ಎಲ್ಲಾ ಆಟಗಾರರ ವೈಫಲ್ಯಕ್ಕೆ ವಯಸ್ಸಾಗಿರುವುದೇ ಮುಖ್ಯ ಕಾರಣ ಎಂಬ ಮಾತುಗಳು ಕೂಡ ಕ್ರಿಕೆಟ್ ಪ್ರೇಮಿಗಳಿಂದ ಕೇಳಿಬರುತ್ತಿದೆ.
-ಕೃಪೆ: ಈ ಸಂಜೆ

Write A Comment