ಮನೋರಂಜನೆ

ಬೆತ್ತಲೆ ವೀಡಿಯೋ ಲೀಕ್: ನನಗೆ ಚಿಂತೆ ಇಲ್ಲ ಎಂದ ರಾಧಿಕಾ ಆಪ್ಟೆ

Pinterest LinkedIn Tumblr

Nude-video-leak-doesnt-bother-me-says-Bollywood-actress-Radhika-Apte

ನವದೆಹಲಿ: ಬೆತ್ತಲೆ ವೀಡಿಯೋ ಲೀಕ್ ಘಟನೆ ಕುರಿತಂತೆ ನನಗೆ ಚಿಂತೆ ಇಲ್ಲ. ಕೆಲಸವಿಲ್ಲದ ಜನ ಮಾಡುವ ಈ ವಿಕೃತ ಕೆಲಸಕ್ಕೆ ನನ್ನ ಸಮಯ ವ್ಯರ್ಥಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ವಿವಾದಿತ ಬಾಲಿವುಡ್ ನಟಿ ಎಂದೇ ಖ್ಯಾತಿಗಳಿಸಿರುವ ರಾಧಿಕಾ ಆಪ್ಟೆ ಹೇಳಿದ್ದಾರೆ.

ಅಂತರ್ಜಾಲದಲ್ಲಿ ನಗ್ನ ಚಿತ್ರಗಳು ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ಶಾರ್ಟ್ ಫಿಲ್ಮ್ ನ ಹಾಟ್ ವೀಡಿಯೋಗಳು ವಾಟ್ಸ್ ಅಪ್ ನಲ್ಲಿ ಲೀಕ್ ಆಗಿದ್ದವು. ಈ ವೀಡಿಯೋ ವಿವಾದ ಸೃಷ್ಟಿಸಿತ್ತಲ್ಲದೇ, ರಾಧಿಕಾ ಆಪ್ಟೆ ಕುರಿತಂತೆ ಹಲವು ಚರ್ಚೆಗಳು ಆರಂಭವಾಗಿದ್ದವು.

ಈ ಪ್ರಕರಣ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ರಾಧಿಕಾ ಆಪ್ಟೆ, ಅಂರ್ಜಾಲ ಹಾಗೂ ವಾಟ್ಸ್ ಅಪ್ ಗಳಲ್ಲಿ ವೀಡಿಯೋ ನೋಡಿ ಇದೊಂದು ತಮಾಷೆ ಅನ್ನಿಸಿತು. ನಾನು ನನ್ನ ವೃತ್ತಿ ರಂಗದಲ್ಲಿ ಕಾರ್ಯನಿರಳರಾಗಿರುವುದರಿಂದ ವಿವಾದಗಳ ಕುರಿತಂತೆ ಯೋಚಿಸುವುದಕ್ಕೆ ನನಗೆ ಸಮಯವಿಲ್ಲ. ಈ ರೀತಿಯ ಯೋಚನೆಗಳು ನಮ್ಮ ಸಮಯವನ್ನು ವ್ಯರ್ಥಮಾಡುತ್ತವೆ. ಘಟನೆಯಿಂದ ನನಗೆ ಅಥವಾ ನನ್ನ ಕುಟುಂಬವರಿಗಾಗಲೀ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ವಿವಾದಗಳಿಗೆ ನನ್ನ ಸಮಯ ವ್ಯರ್ಥಮಾಡಲು ನನಗೆ ಇಲ್ಲ. ಜನರಿಗೆ ಗೊತ್ತಿದೆ ಮಾಡುವುದಕ್ಕೆ ಕೆಲಸವಿಲ್ಲ ಜನ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗದೆ ಈ ರೀತಿಯ ವೀಡಿಯೋಗಳನ್ನು ಮಾಡಿ ಸುಮ್ಮನೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕೆಲಸವಿಲ್ಲದ ಜನ ಸೃಷ್ಟಿಸುವ ವಿವಾದಗಳಿಗೆ ನಾನು ನನ್ನ ಸಮಯ ಹಾಳುಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ.
-ಕೃಪೆ; ಕನ್ನಡ ಪ್ರಭ

Write A Comment