ಮನೋರಂಜನೆ

ತಮಿಳು ನಟಿಯೊಬ್ಬರ ಸೊಸೆಯಾಗ್ತಿದ್ದಾರಂತೆ ನಯನಾತಾರಾ!

Pinterest LinkedIn Tumblr

nayana23

ಎರಡೆರಡು ಪ್ರೇಮ ವೈಫಲ್ಯಗಳ ನಂತರ ನಟಿ ನಯನತಾರಾ ಮದುವೆಗೆ ಸಿದ್ಧವಾಗುತ್ತಿದ್ದಾರಂತೆ. ನಟ ಪ್ರಭುದೇವ್ ಜೊತೆಗಿನ ಲವ್ ಬ್ರೇಕ್ ಅಪ್ ನಂತರ ವೃತ್ತಿಯ ಕಡೆ ನಯನಾ ಹೆಚ್ಚು ಗಮನ ಹರಿಸಿದ್ದರು.

ನಯನತಾರಾ ಹಿರಿಯ ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆಂಬುದು ಇತ್ತೀಚಿನ ತಾಜಾ ಸುದ್ದಿ. ಆದರೆ ಆ ನಟಿ ಯಾರು, ನಯನ ಮದುವೆಯಾಗುತ್ತಿರುವ ಹುಡುಗ ಯಾರು ಎಂಬುದು ಮಾತ್ರ ಇನ್ನೂ ನಿಗೂಢ.

ಪ್ರೇಮ ವೈಫಲ್ಯದಿಂದ ಜೀವನದಲ್ಲಿ ಎರೆಡೆರಡು ಬಾರಿ ಎಡವಿದರೂ ವೃತ್ತಿ ಬದುಕು ಹಳಿ ತಪ್ಪದಂತೆ ನಯನ ಎಚ್ಚರ ವಹಿಸಿದ್ದಾರೆ. ಹೀಗಾಗಿ ಇಂದಿಗೂ ಸಹ ಅವರಿಗೆ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಲಭಿಸುತ್ತಿದೆ. ಪ್ರಸಿದ್ಧ ನಟ ಸೂರ್ಯ, ಕಾರ್ತಿ ಹಾಗೂ ವಿಜಯ್  ಸೇತುಪತಿಯಂತ ನಟರ ಜೊತೆ ನಯನತಾರಾ ಅಭಿನಯಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಯನತಾರಾ ಶೂಟಿಂಗ್ ಮುಗಿದ ನಂತರ ಸಿಕ್ಕಾಪಟ್ಟೆ ಫೋನಿನಲ್ಲಿ ಬ್ಯುಸಿಯಾಗಿರ್ತಾರಂತೆ. ನಯನತಾರಾ ತಮ್ಮ ವುಡ್ ಬಿ ಯೊಂದಿಗೆನೇ ಮೊಬೈಲ್ ನಲ್ಲಿ

ಮಾತಾಡುತ್ತಿರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇಷ್ಟು ದಿನ ಮೂಡಿಯಾಗಿರುತ್ತಿದ್ದ ನಯನಾ ಇತ್ತೀಚೆಗೆ ಚಿತ್ರತಂಡಗಳ ಜೊತೆ ಖುಷಿಯಾಗಿರುತ್ತಾರಂತೆ. ಆದ್ರೆ ನಯನತಾರಾರನ್ನು ವರಿಸುತ್ತಿರುವ ಆ ಅದೃಷ್ಟಶಾಲಿ ಯಾರು ಎಂಬುದು ಸದ್ಯದ ಕೂತೂಹಲ.

Write A Comment