ಮನೋರಂಜನೆ

ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಪ್ರೇಮಾ

Pinterest LinkedIn Tumblr

premaಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಒಂಥರಾ ಬಿಡಿಸಲಾಗದ ನಂಟು. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಜಿಗಿದು ಹೆಸರು ಮಾಡಿದ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ರಾಜಕೀಯ ರಂಗದಲ್ಲಿ ಜನಪ್ರಿಯವಾಗಿದ್ದಾರೆ.

ಇದೇ ಸಾಲಿಗೆ ಈಗ ಲೇಟೆಸ್ಟ್ ಎಂಟ್ರಿ ಕೊಡುವುದಕ್ಕೆ ನಟಿ ಪ್ರೇಮಾ ಸಿದ್ಧತೆ ನಡೆಸುತ್ತಿದ್ದಾರೆ. ಹಾಗನ್ನುತ್ತಿವೆ ಪ್ರೇಮಾ ಆಪ್ತ ವಲಯ. ಇತ್ತೀಚೆಗಷ್ಟೇ ರೂಪದರ್ಶಿಯಾಗಿ ಮಾಡೆಲಿಂಗ್ ರಂಗಕ್ಕೆ ಕಾಲಿಟ್ಟ ಪ್ರೇಮಾ, ಇದೀಗ ಸಮಾಜ ಸೇವೆ ಮಾಡುವುದಕ್ಕೆ ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ.

ಬರುವ ಬಿ.ಬಿ.ಎಂ.ಪಿ ಚುನಾವಣೆನಲ್ಲಿ, ವಾರ್ಡ್ ಒಂದರಿಂದ ಅಖಾಡಕ್ಕಿಳಿಯಲು ನಟಿ ಪ್ರೇಮಾ ಮನಸ್ಸು ಮಾಡಿದ್ದಾರಂತೆ. ಯಾವ ವಾರ್ಡ್ ಮೂಲಕ ಅನ್ನುವ ಮಾಹಿತಿ ಬಹಿರಂಗವಾಗಿಲ್ಲ. ಬಿ.ಬಿ.ಎಂ.ಪಿ ಎಲೆಕ್ಷನ್ ದಿನಾಂಕ ಕೂಡ ನಿಗದಿಯಾಗಿಲ್ಲ. ಆದ್ರೆ, ಪ್ರೇಮಾ ಮಾತ್ರ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ ಅನ್ನುತ್ತಿದ್ದಾರೆ ಪ್ರೇಮಾ ಹತ್ತಿರದಿಂದ ಬಲ್ಲವರು.

2009 ರಲ್ಲಿ ರಿಲೀಸ್ ಆದ ‘ಶಿಶಿರ’ ಸಿನಿಮಾ ಬಿಟ್ಟರೆ, ಬಣ್ಣದ ಲೋಕದಿಂದ ಬಹುದೂರ ಸರಿದಿದ್ದ ನಟಿ ಪ್ರೇಮಾ ಈಗ ರಾಜಕೀಯ ರಂಗ ಪ್ರವೇಶ ಮಾಡುತ್ತಿರುವುದು ಎಲ್ಲರ ಕಣ್ಣರಳಿಸಿದೆ.

Write A Comment