ಮನೋರಂಜನೆ

ಸನ್ನಿ ಜೊತೆ ನನ್ನ ಹೋಲಿಕೆ ಮಾಡಬೇಡಿ: ನಾನು ಪ್ರತಿಭೆಯಿಂದ ಮೇಲೆ ಬಂದವಳು ಪೋರ್ನ್ ಸಿನಿಮಾ ಮಾಡಿ ಬಂದವಳಲ್ಲ: ರಾಖಿ ಸಾವಂತ್

Pinterest LinkedIn Tumblr

Rakhi-Sawant-Insults-Sunny-Leone-says-Dont-compare-me-with-Porn-star

ಮುಂಬೈ: ಬಾಂಬ್ ಗಳನ್ನು ಸಿಡಿಸುವುದರಲ್ಲಿ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಖತ್ ಎಕ್ಸ್ ಪರ್ಟ್ ಆಗಿರುವ ಹಾಗೂ ವಿವಾದದ ರಾಣಿ ಎಂದು ಖ್ಯಾತಿ ಪಡೆದಿರುವ ಐಟಂ ಗರ್ಲ್ ರಾಖಿ ಸಾವಂತ್ ಇದೀಗ ಈಗ ಮತ್ತೆ ಸುದ್ದಿಗೆ ಬಂದಿದ್ದು, ಪೋರ್ನ್ ಫಿಲ್ಮ್ ಸ್ಟಾರ್ ಸನ್ನಿಲಿಯೋನ್ ಜೊತೆ ನನ್ನ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾಳೆ.

ಯುವಕರ ಪಾಲಿಗೆ ಕನಸಿನ ರಾಣಿಯಾಗಿರುವ ನಟಿ ಸನ್ನಿಸಲಿಯೋನ್ ಅವರ ಜನಪ್ರಿಯತೆ ಕಂಡು ಅಪ್ ಸೆಟ್ ಆಗಿರುವ ರಾಖಿ ಸಾವಂತ್, ವೀಡಿಯೋ ಆಲ್ಬನ್ ಶೂಟಿಂಗ್ ನಲ್ಲಿ ತೊಡಗಿದ್ದ ವೇಳೆ ಖಾಸಗಿ ಮಾಧ್ಯಮದ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಕಿಡಿಕಾರಿದ್ದು ಪೋರ್ನ್ ಸ್ಟಾರ್ ಸನ್ನಿ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನು ನನ್ನ ನೃತ್ಯ ಹಾಗೂ ಕಲೆ ಹಾಗೂ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರ ಗೆದ್ದವಳು ಹಾಗೂ ಮೇಲೆ ಬಂದವಳು.

ನಾನು ಎಂದಿಗೂ ಪೋರ್ನ್ ಸಿನಿಮಾಗಳನ್ನು ಮಾಡಿಲ್ಲ. ನನ್ನಲ್ಲಿ ಇಲ್ಲದಿರುವುದು ಸನ್ನಿಲಿಯೋನ್ ಬಳಿ ಏನಿದೆ. ಇಂಡಸ್ಟ್ಟಿಯಲ್ಲಿ ಸನ್ನಿಲಿಯೋನ್ ಳನ್ನು ಹಿಂದಿಕ್ಕುವುದು ನನ್ನು ಗುರಿಯಾಗಿದೆ. ನಾನು ಸುಂದರಿ ಹಾಗೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ. ನನ್ನನ್ನು ಸನ್ನಿ ಲಿಯೋನ್ ಜೊತೆ ಹೋಲಿಕೆ ಮಾಡುವ ಬದಲು ಅಂತರಾಷ್ಟ್ರೀಯ ನಟಿಯರಾದ ಜೆನ್ನಿಫರ್ ಲೋಪೆಜ್ ಮತ್ತು ಮಡೋನಾ ಜೊತೆ ಹೋಲಿಕೆ ಮಾಡಿ ಎಂದು ಹೇಳಿದ್ದಾಳೆ.

Write A Comment