ಮನೋರಂಜನೆ

ಮಹಿಳಾ ಅಭಿಮಾನಿಗಳಿಂದ ದೂರವಿರಿ : ಆಟಗಾರರಿಗೆ ಬಿಸಿಸಿಐ ಸೂಚನೆ

Pinterest LinkedIn Tumblr

Female-Fans

ನವದೆಹಲಿ, ಏ.14- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹೆಚ್ಚುತ್ತಿರುವ ಮ್ಯಾಚ್ ಫಿಕ್ಸಿಂಗ್ ದಂಧೆಯನ್ನು ತಡೆಗಟ್ಟಲು ಮುಂದಾಗಿರುವ ಬಿಸಿಸಿಐ ಮಹಿಳಾ ಅಭಿಮಾನಿಗಳಿಂದ ದೂರ ಇರಬೇಕೆಂದು ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮಹಿಳಾ ಅಭಿಮಾನಿಗಳ ಜತೆ ನೀವು ಹೆಚ್ಚು ಸಲಗೆಯಿಂದ ಇದ್ದರೆ ಅವರು ನಿಮ್ಮನ್ನು ಬುಕ್ಕಿಗಳ ಬಲೆಗೆ ಬೀಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಆಟಗಾರರು ಅವರ ಜತೆ ಸಂಪರ್ಕ ಇಲ್ಲವೆ ಸಲಿಗೆಯಿಂದ ವರ್ತಿಸಬಾರದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ತಾಕೀತು ಮಾಡಿದೆ.

ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆದ ವೇಳೆ ಅನೇಕ ಪ್ರಕರಣಗಳಲ್ಲಿ ಮಹಿಳೆಯರೇ ಬುಕ್ಕಿಗಳ ಜತೆ ಮಧ್ಯವರ್ತಿಗಳಂತೆ ವರ್ತಿಸಿ ಆಟಗಾರರನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ. ನೀವು ಇವರ ಜತೆ ಎಷ್ಟು ಸಲಗೆಯಿಂದ ಇರುತ್ತೀರೋ, ಅದು ನಿಮಗೆ ಕಂಟಕವಾಗಿ ಪರಿಣಮಿಸಲಿದೆ. ಯಾವ ಕಾರಣಕ್ಕೂ ಮಹಿಳಾ ಅಭಿಮಾನಿಗಳ ಜತೆ ದೂರವಾಣಿಯಲ್ಲಿ ಮಾತನಾಡುವುದು, ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವುದು ಸೇರಿದಂತೆ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಬೇಕು ಎಂದು ತಾಕೀತು ಮಾಡಿದ್ದಾರೆ.

ಕೆಲವು ಮಹಿಳೆಯರು ಹನಿ ಟ್ರ್ಯಾಪ್ ಮೂಲಕವೂ ಆಟಗಾರರನ್ನು ಸಿಲುಕಿಸುವ ಸಾಧ್ಯತೆ ಇದೆ. ಕಳೆದ ಬಾರಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡಿದ್ದ ಮೂವರು ಆಟಗಾರರಿಗೆ ಮಹಿಳೆಯರೆಂದರೆ ಕಂಟಕವಾಗಿತ್ತು ಎಂಬುದನ್ನು ಬಿಸಿಸಿಐ ಮನವರಿಕೆ ಮಾಡಿಕೊಟ್ಟಿದೆ. ಮತ್ತೊಂದೆಡೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರತಿಯೊಂದು ಪಂದ್ಯದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆಟಗಾರರು ಉಳಿಯುವ ಕೊಠಡಿಗಳು, ಅವರ ಸ್ನೇಹಿತರ ದೂರವಾಣಿ ಕರೆಗಳು, ಇತರ ಚಟುವಟಿಕೆಗಳು ಸೇರಿದಂತೆಯೂ ತೀವ್ರ ನಿಗಾ ವಹಿಸಲಾಗಿದೆ.

Write A Comment