ಮನೋರಂಜನೆ

ಎರಡನೆ ಹೆಣ್ಣು ಮಗುವಿಗೆ ಜನ್ಮವಿತ್ತ ಬ್ಯೂಟಿಕ್ವೀನ್ ನಟಿ ರಂಭಾ

Pinterest LinkedIn Tumblr

Rambha-Actress

ದಕ್ಷಿಣದಲ್ಲಿ ಕಳೆದ ದಿನಗಳ ಸುಂದರ ನಾಯಕಿ ರಂಭಾ ಗೊತ್ತಲ್ಲವೇ… ತೆಲುಗು, ತಮಿಳು, ಕನ್ನಡ, ಮಲಯಾಳಿ ಮಾತ್ರವಲ್ಲದೆ ಹಿಂದಿಯಲ್ಲೂ ಮೆರೆದ ಬ್ಯೂಟಿಕ್ವೀನ್ ರಂಭಾ… ರಂಭಾ ಮದುವೆಯಾಗಿದ್ದು, ಅದೂ ಉದ್ಯಮಿ ಇಂದಿರನ್ ಎಂಬಾತನನ್ನು ಮದುವೆಯಾಗಿದ್ದು, ನಂತರ ಕೆನಡಾದಲ್ಲಿ ನೆಲೆಸಿದ್ದು, ಕಳೆದ ಮೂರ್ನಾ ಲ್ಕು ವರ್ಷಗಳ ಹಿಂದಷ್ಟೆ ಮೊದಲ ಮಗುವಿಗೆ ಜನ್ಮವಿತ್ತು ಆಗಲೇ ತಾಯಾಗಿದ್ದು ಅವೆಲ್ಲವೂ ಈಗ ಇತಿಹಾಸ.  ಆದರೆ, ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ, ರಂಭಾ ಎಂಬ ಗೊಂಬೆ ಈಗ ಇನ್ನೂ ಒಂದು ಮಗುವಿಗೆ ಜನ್ಮ ನೀಡಿ ಮತ್ತೆ ತಾಯಾಗಿದ್ದಾಳಂತೆ.

ಅಂದರೆ ಎರಡನೆ ಬಾರಿಗೆ ರಂಭಾ ತಾಯಿಯಾಗಿದ್ದಾಳಂತೆ. ಮೊದಲ ಮಗಳಿಗೆ ಮೂರು ವರ್ಷ. ಎರಡನೆಯದೂ ಹೆಣ್ಣು ಮಗುವಂತೆ. ನಿಮಗೆ ನೆನಪಿರಬಹುದು ಸದ್ಯ ಕೆಲ ದಿನಗಳ ಹಿಂದೆ ಟಿವಿ ಕಾರ್ಯಕ್ರಮ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾಳೆ. ಅಂದರೆ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದಾಳೆ. 1990ರ ದಶಕದಲ್ಲಿ ಅಂದಿನ ಯುವ ಪಡ್ಡೆಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದ ರಂಭಾ ‘ಅರುಣಾಚಲಂ’ ಕದಾಲಾ ಕದಾಲಾ, ವಿಐಪಿಗಳಂಥ ಚಿತ್ರಗಳಲ್ಲಿ ನಟಿಸಿ ಹುಡುಗರನ್ನು ಹುಚ್ಚೆಬ್ಬಿಸಿದ್ದಳು.

Write A Comment