ಮನೋರಂಜನೆ

ಹಲ್ಲುಬ್ಬಿಯಾಗಿ ಕಂಗನಾ!

Pinterest LinkedIn Tumblr

kangna-ranaut

ಗ್ಯಾಂಗ್‍ಸ್ಟರ್ ನಾಯಕಿ ಕಂಗನಾ ರನೌತ್‍ಗೆ ದ್ವಿಪಾತ್ರದ ಮಾಡುವ ಕನಸು ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿಂದೆ ಆಕೆ ಫ್ಯಾಷನ್ ಮತ್ತು ಕ್ವೀನ್ ಚಿತ್ರಗಳಲ್ಲಿ ಸವಾಲಿನ ಪಾತ್ರಗಳನ್ನು ಮಾಡಿದ್ದಾಳಾದರೂ, ದ್ವಿಪಾತ್ರದಷ್ಟು ಛಾಲೆಂಜಿಂಗ್ ಯಾವ ಪಾತ್ರವೂ ಅನಿಸುವುದಿಲ್ಲ ಅನ್ನುತ್ತಾಳೆ ಕಂಗನಾ.

ಆಕೆಯ ಆಸೆ ಈಡೇರಿಸಲೆಂದೇ ಈಗ ತನು ವೆಡ್ಸ್ ಮನು ಚಿತ್ರದ ಸೀಕ್ವೆಲ್ ಬರುತ್ತಿದೆ. ಚಿತ್ರದ ಹೆಸರು ತನು ವೆಡ್ಸ್ ಮನು ರಿಟನ್ರ್ಸ್ ಅಂತ. ಈ ಚಿತ್ರದಲ್ಲಿ ಕಂಗನಾಗೆ ದ್ವಿಪಾತ್ರ. 2011ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ತನು ವೆಡ್ಸ್ ಮನು ಚಿತ್ರದಲ್ಲಿ ಅವರ ಮದುವೆ ತನಕದ ದೃಶ್ಯಗಳಿದ್ದರೆ, ಇಲ್ಲಿ ವಿವಾಹದ ನಾಲ್ಕು ವರ್ಷಗಳ ನಂತರದ ಕಥೆ ಮುಂದುವರೆಯಲಿದೆ . ಕುಸುಮ್ ಮತ್ತು ತನು ಎಂಬ ಎರಡು ಸ್ಪೆಷಲ್ ಪಾತ್ರಗಳಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾಳೆ.

ಎರಡೂ ಪಾತ್ರಗಳು ಮುಖಾಮುಖಿಯಾಗುವಾಗ ಬೇರೆಬೇರೆ ಎಂಬಂತೆ ನಟಿಸುವುದೇ ಸವಾಲು ಎನ್ನುವ ಕಂಗನಾ ಆ ಬಗ್ಗೆ ಪ್ರೇಕ್ಷಕರು ಏನನ್ನುತ್ತಾರೆ ಎಂಬ ಕುತೂಹಲದಲ್ಲಿದ್ದಾಳೆ. ಕುಸುಮ್ ಪಾತ್ರದಲ್ಲಿ ಈಕೆಗೆ ಉಬ್ಬು ಹಲ್ಲುಗಳು ಇರುತ್ತದೆ ಎಂಬುದು ಇನ್ನೊಂದು ವಿಶೇಷ!

Write A Comment