ಮನೋರಂಜನೆ

ಸಾಮಾಜಿಕ ಕಾಳಜಿ ಮೆರೆದ ದೀಪಿಕಾ ಪಡುಕೋಣೆ

Pinterest LinkedIn Tumblr

deepika-padukone

ಬಾಲಿವುಡ್‌ನ ಮಿಂಚುಳ್ಳಿ ಚೆಲುವೆ ಕನ್ನಡದ ದೀಪಿಕಾ ಪಡುಕೋಣೆ ಕಳೆದ ವರ್ಷ ಖಿನ್ನತೆಗೆ ಒಳಗಾಗಿ ಸಾಕಷ್ಟು ಜರ್ಝರಿತಳಾಗಿದ್ದ ವಿಷಯ ಇದೀಗ ಗುಟ್ಟಾಗೇನೂ ಉಳಿದಿಲ್ಲ. ಈ ಜಂಜಾಟದಿಂದ ಹೊರಬಂದಿರುವ ದೀಪಿಕಾ ತನ್ನಂತೆ ಬೇರೆ ಯಾರೂ ಇಂತಹ ಖಿನ್ನತೆಗೆ ಒಳಗಾಗಬಾರದು ಎಂದು ಭಾವಿಸಿದ್ದಾಳೆ. ಅದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಆಕೆ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

ಈ ಖಿನ್ನತೆಗೆ ಸಂಬಂಧಪಟ್ಟಂತೆ ತಜ್ಞ ವೈದ್ಯರುಗಳ ಮೂಲಕ ಸಂಶೋಧನೆ ನಡೆಸಲು ತೀರ್ಮಾನಿಸಿರುವ ದೀಪಿಕಾ ಅದಕ್ಕಾಗಿ ಒಂದು ತಂಡವನ್ನು ನೇಮಿಸಿಕೊಂಡಿದ್ದಾಳೆ. ಮಾನಸಿಕ ಶಾಂತಿಗೆ ‘ಲೀವ್ ಲವ್ ಲಾಫ್’ ಫೌಂಡೇಷನ್ ಸ್ಥಾಪಿಸಿರುವ ದೀಪಿಕಾ ಆ ಮೂಲಕ ಖಿನ್ನತೆಗೆ ಒಳಗಾಗದಂತೆ ತಡೆಯುವುದು ಹೇಗೆ ಎಂಬುದನ್ನು ಎಲ್ಲೆಡೆ ಪ್ರಚುರಪಡಿಸುವ ಸಿದ್ಧತೆ ಕೈಗೊಂಡಿದ್ದಾಳೆ. ಇದಕ್ಕೆ ಆಕೆಯ ಮನೆಯವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Write A Comment