ಮನೋರಂಜನೆ

ವಿಶ್ವಕಪ್ ಕೈಚೆಲ್ಲಿದ ಬ್ಲೂ ಬಾಯ್ಸ್ ಗೆ ಮತ್ತೊಂದು ಶಾಕ್..!

Pinterest LinkedIn Tumblr

Blue-Boys-India

ಮೆಲ್ಬೋರ್ನ್,ಮಾ.30- ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದ ಭಾರತೀಯ ಆಟಗಾರರಿಗೆ ಮತ್ತೊಂದು ಶಾಕ್ ಅನ್ನು ಐಸಿಸಿ ನೀಡಿದೆ.  ಇಂದಿಲ್ಲಿ ಬಿಡುಗಡೆಗೊಂಡ ಐಸಿಸಿ ಕ್ರಿಕೆಟ್ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರರು ಸ್ಥಾನ ಪಡೆದಿರುವುದು ಭಾರತೀಯ ಆಟಗಾರರ ಆಟವನ್ನು  ಓರೆಗೆ ಹಚ್ಚಿದಂತಿದೆ. ಐಸಿಸಿಯ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ಮಹೇಂದ್ರಸಿಂಗ್ ಧೋನಿ, ಉಪನಾಯಕ ವಿರಾಟ್‌ಕೊಹ್ಲಿ ರವರ ಹೆಸರು  ಪ್ರಸ್ತಾಪವಾಗದಿದ್ದರೂ

ಕೂಡ ವಿಶ್ವಕಪ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ  ಮೊಹಮ್ಮದ್  ಸಮಿ (17 ವಿಕೆಟ್), ಉಮೇಶ್ ಯಾದವ್ (18 ವಿಕೆಟ್), ರವಿಚಂದ್ರನ್ ಅಶ್ವಿನ್ (13 ವಿಕೆಟ್) ರ ಹೆಸರುಗಳು ಪ್ರಸ್ತಾಪವಾಯಿತಾದರೂ ಕೊನೆಯ ಗಳಿಗೆಯಲ್ಲಿ ಈ ಆಟಗಾರರನ್ನು ಕಡೆಗಣಿಸಲಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಸ್ಟ್ರೇಲಿಯಾದ ಮಿಚಲ್ ಸ್ಟ್ರಾಕ್ (22 ವಿಕೆಟ್), ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೋಲ್ಟ್ (22 ವಿಕೆಟ್), ಅತಿ  ಹೆಚ್ಚು ರನ್ ಗಳಿಸಿದ ನ್ಯೂಜಿಲ್ಯಾಂಡ್‌ನ ಮಾರ್ಟಿನ್ ಗುಪ್ಟಿಲ್ (547 ರನ್), ಶ್ರೀಲಂಕಾದ ಕುಮಾರಸಾಂಗಾಕಾರ (541 ರನ್),  ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (482 ರನ್) ಐಸಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ತಮ್ಮ ಅದ್ಭುತ ಪ್ರದರ್ಶನದಿಂದ ತಂಡವನ್ನು ಫೈನಲ್‌ವರೆಗೂ ಕೊಂಡೊಯ್ದ ನ್ಯೂಜಿಲ್ಯಾಂಡ್‌ನ  ಬ್ರೆಡಂ ಮೆಲುಕುಲಂ ಅವರು ಐಸಿಸಿ ಟೀಮ್‌ನ ನಾಯಕತ್ವವವನ್ನು ವಹಿಸಿಕೊಂಡಿದ್ದಾರೆ. ವಿಶ್ವಕಪ್  ಸರಣಿಯಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದ ಜಿಂಬಾಬ್ವೆಯ ನಾಯಕ ಬ್ರೆಡಂ ಟೇಲರ್ (433 ರನ್) ರನ್ನು 12ನೆ ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಆದರೆ ಭಾರತದ ಯಾವೊಬ್ಬ ಆಟಗಾರರು ಐಸಿಸಿ ತಂಡದಲ್ಲಿ ಸ್ಥಾನ ಪಡೆಯದಿರುವುದು ಶೋಚನೀಯವೇ ಸರಿ. ತಂಡದ ವಿವರ: ನ್ಯೂಜಿಲ್ಯಾಂಡ್‌ನ  ಬ್ರೆಡಂ ಮೆಕುಲಂ (ನಾಯಕ), ಮಾರ್ಟಿನ್ ಗುಪ್ಟಿಲ್, ಕೋರೆ ಅಂಡರ್ಸನ್, ಡೇನಿಯಲ್ ವಿಟೋರಿ, ಟ್ರೆಂಟ್ ಬೋಲ್ಟ್ , ಶ್ರೀಲಂಕಾದ ಕುಮಾರ ಸಂಗಾಕಾರ (ವಿಕೆಟ್ ಕೀಪರ್),ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಗ್ಲೇನ್ ಮ್ಯಾಕ್ಸ್‌ವೆಲ್, ಮಿಚಲ್ ಸ್ಟ್ರಾಕ್ , ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್,  ಮೊರ್ನೆ ಮಾರ್ಕಲ್, ಜಿಂಬಾಬ್ವೆಯ ಟೇಲರ್ (12ನೆ ಆಟಗಾರ).

Write A Comment