ಲಖನೌ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 95 ರನ್ ಗಳ ಅಂತರದಿಂದ ಟೀಂ ಇಂಡಿಯಾ ಸೋತ ನಂತರ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಎಲ್ಲೆ ಮೀರಿತ್ತು. ಟಿವಿಗಳನ್ನು ಹೊಡೆದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಏತನ್ಮಧ್ಯೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ 1000 ರು. ಚೆಕ್ ಕಳಿಸಿ ಲೇವಡಿ ಮಾಡಿದ್ದಾರೆ.
ಧೋನಿಗೆ 1000 ರು. ಚೆಕ್ ಜೊತೆಗೆ ಪತ್ರವೊಂದನ್ನು ಕಳುಹಿಸಿರುವ ಉತ್ತರ ಪ್ರದೇಶದ ಐಜಿ ಅಮಿತಾಭ್ ಠಾಕೂರ್, ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಫೈನಲ್ ಪಂದ್ಯವನ್ನು ಭಾರತೀಯರು ವೀಕ್ಷಿಸಲು ಸಾಧ್ಯವಾಗದಂತೆ ಮಾಡಿರುವುದಕ್ಕೆ ಅಮಿತಾಭ್ ಠಾಕೂರ್ ಧೋನಿಯವರನ್ನು ಅಭಿನಂದಿಸಿದ್ದಾರೆ.
ಕ್ರಿಕೆಟನ್ನು ಕ್ರೀಡೆಯನ್ನು ಟೀಕಿಸುವ ಅಮಿತಾಬ್ ಠಾಕೂರ್ ವಿಶ್ವಕಪ್ ಆರಂಭವಾದ ಬಳಿಕ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದರಲ್ಲೇ ತಲ್ಲೀನರಾಗಿದ್ದರು. ಈಗ ಭಾರತ ಸೋತಿರುವ ಕಾರಣ ಮತ್ತೆ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಹೇಳಿದ್ದಾರೆ.
ಅಲ್ಲದೆ ತಂಡದ ಎಲ್ಲಾ ಆಟಗಾರರು ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ. ಅಮಿತಾಭ್ ಠಾಕೂರ್ ಯಾವ ಕಾರಣಕ್ಕಾಗಿ ಚೆಕ್ ಹಾಗೂ ಪತ್ರ ಕಳುಹಿಸಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.