ನಿರ್ದೇಶಕರ ಮಕ್ಕಳು, ಹೀರೋಗಳ ಮಕ್ಕಳು ಬಾಲನಟರಾಗಿಯೋ, ಹೀರೋಗಳಾಗಿಯೋ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಸುದ್ದಿಯೇನಲ್ಲ. ಈಗಾಗಲೇ ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ (ಸೋನು) ಮತ್ತು ನಿರ್ದೇಶಕ ಪ್ರೇಮ್ ಪುತ್ರ ಸೂರ್ಯ ಸೇರಿದಂತೆ ಹಲವು ನಿರ್ದೇಶಕರ ಮತ್ತು ಹೀರೋಗಳ ಮಕ್ಕಳು ಕ್ಯಾಮೆರಾ ಮುಂದೆ ನಿಂತಿದ್ದಾಗಿದೆ. ಪರಮೇಶ್ ನಿರ್ದೇಶನದ “ಮಾಮು ಟೀ ಅಂಗಡಿ’ ಚಿತ್ರದಲ್ಲಿ ಏಕಾಂತ್ ನಟಿಸಿದರೆ, ಪ್ರೇಮ್ ಅಭಿನಯದ “ಡಿಕೆ’ ಚಿತ್ರದ ಹಾಡೊಂದರಲ್ಲಿ ಅವರ ಪುತ್ರ ಸೂರ್ಯ ಅಪ್ಪನೊಂದಿಗೆ ಸ್ಟೆಪ್ ಹಾಕಿದ್ದಾನೆ. ಈಗ ದರ್ಶನ್ ಪುತ್ರ ವಿನೀಶ್ ಸರದಿ. ಹೌದು. ದರ್ಶನ್ ಅಭಿನಯದ “ಐರಾವತ’ ಚಿತ್ರದಲ್ಲಿ ವಿನೀಶ್ ಅಪ್ಪನ ಜತೆ ಕಾಣಿಸಿಕೊಂಡಿದ್ದಾನೆ.
ಈಗಾಗಲೇ ವಿನೀಶ್ ಅಭಿನಯದ ದೃಶ್ಯ ಚಿತ್ರೀಕರಣಗೊಂಡಿದ್ದು, ಪೊಲೀಸ್ ಅಧಿಕಾರಿಯ ಕಾಸ್ಟೂéಮ್‌ನಲ್ಲಿ ಕಂಗೊಳಿಸಿದ್ದಾನೆ. ಅಪ್ಪನ ಕಾಂಬಿನೇಷನ್‌ನಲ್ಲಿ ಚಿತ್ರೀಕರಣಗೊಂಡಿರುವ ದೃಶ್ಯದಲ್ಲಿ ದರ್ಶನ್ ಕೂಡ ಪೊಲೀಸ್ ಅಧಿಕಾರಿ ಗೆಟಪ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ವಿನೀಶ್ ಅಭಿನಯಿಸುವ ಮೂಲಕ ತೂಗುದೀಪ ಶ್ರೀನಿವಾಸ ಕುಟುಂಬದ ಮೂರನೇ ತಲೆಮಾರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಾಗಿದೆ.
ಸದ್ಯಕ್ಕೆ ಅಪ್ಪ ಮತ್ತು ಮಗ ಪೊಲೀಸ್ ಅಧಿಕಾರಿಯ ಕಾಸ್ಟೂéಮ್‌ನಲ್ಲಿರುವ ಫೋಟೋವೊಂದು ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ದರ್ಶನ್ ಕೂಡ ಸಖತ್ ಸೆ¾„ಲ್‌ಕೊಟ್ಟು, ಮಗನೊಂದಿಗೆ ಸೆಲ್ಯೂಟ್ ಮಾಡಿರುವ ಫೋಸ್‌ಗೆ ಸಾಕಷ್ಟು ಲೈಕ್ಸ್‌ಗಳು ಬಂದಿವೆ. ಅದೇನೆ ಇರಲಿ, ತೂಗುದೀಪ ಫ್ಯಾಮಿಲಿಯಿಂದ ಹೊಸ ಪ್ರತಿಭೆಯೊಂದು ಬಣ್ಣ ಹಚ್ಚುವ ಮೂಲಕ ಈಗಷ್ಟೇ ಚಿತ್ರರಂಗಕ್ಕೆ ಆಗಮನವಾಗಿರುವುದರಿಂದ ದರ್ಶನ್ ಅಭಿಮಾನಿಗಳಿಗಂತೂ ಇನ್ನಿಲ್ಲದ ಖುಷಿ.
