ಮನೋರಂಜನೆ

ರಾಷ್ಟ್ರ ಪ್ರಶಸ್ತಿ ಪಡೆದ ‘ನಾನು ಅವನಲ್ಲ, ಅವಳು’

Pinterest LinkedIn Tumblr

AVANALL

ಈ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು ಕನ್ನಡದ ‘ನಾನು ಅವನಲ್ಲ, ಅವಳು’ ಚಿತ್ರದ ಅಭಿನಯಕ್ಕೆ ಶ್ರೇಷ್ಠ ನಟ ಪ್ರಶಸ್ತಿ ಸಂಚಾರಿ ವಿಜಯ್ ಅವರಿಗೆ ದಕ್ಕಿದೆ. ಈ ಚಿತ್ರದ ಶೀರ್ಷಿಕೆಯೇ ಭಿನ್ನವಾಗಿದ್ದು ಇದರ ಕಥೆ ಏನಿರಬಹುದು ಎಂಬ ಕುತೂಹಲ ಮೂಡುತ್ತದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಇದೇ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿಯರ ಕುರಿತು ಕೈಗೆತ್ತಿಕೊಂಡ ಚಿತ್ರವಿದು. ‘ನಾನು ಅವನಲ್ಲ, ಅವಳು’ ಕಥೆ ಲೈಂಗಿಕ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಕುರಿತಾಗಿದೆ. [62ನೇ ರಾಷ್ಟ್ರೀಯ ಪ್ರಶಸ್ತಿ: ಕಂಗನಾ, ಸಂಚಾರಿ ವಿಜಯ್ ಬೆಸ್ಟ್]

ಈ ಚಿತ್ರವನ್ನು ಬಿ.ಎಸ್. ಲಿಂಗದೇವರು ನಿರ್ದೇಶಿಸಿದ್ದು ಲೈಂಗಿಕ ಅಲ್ಪಸಂಖ್ಯಾತೆ ವಿದ್ಯಾ ಅವರು ಬರೆದಿರುವ ‘I am Vidya’ ಕೃತಿಯ ಸಿನಿಮಾ ರೂಪಾಂತರ. ಲೈಂಗಿಕ ಅಲ್ಪಸಂಖ್ಯಾತರ ಜೀವನ ಕುರಿತಾದ ಅಧಿಕೃತ ಕೃತಿ ಇದು ಎನ್ನುತ್ತಾರೆ ಲಿಂಗದೇವರು.

ಈ ಕೃತಿಯನ್ನು ಚಿತ್ರ ಮಾಡಲು ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ ಶೇಷಾದ್ರಿ ಹಾಗೂ ಬರಹಗಾರರಾದ ಗೋಪಾಲಕೃಷ್ಣ ಪೈ, ಮನು ಚಕ್ರವರ್ತಿ ಅವರು ಚಿತ್ರಕಥೆ ರಚನೆಗೆ ಸಹಕರಿಸಿರುವುದು ಇನ್ನೊಂದು ವಿಶೇಷ.

ಟಿವಿ ಧಾರಾವಾಹಿಗಳ ಜನಪ್ರಿಯ ನಿರ್ಮಾಪಕರಾದ ರವಿ ಗರಣಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ನೈಜತೆ ತರಲು ನಿರ್ದೇಶಕರು ಪಟ್ಟಪಾಡು ಅಷ್ಟಿಷ್ಟಲ್ಲ. ಜನಾರಣ್ಯದ ನಡುವೆಯೇ ಚಿತ್ರೀಕರಣ ಮಾಡಬೇಕಾಗಿತ್ತು. ಜೊತೆಗೆ 150ಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ಈ ಚಿತ್ರದ ಚಿತ್ರೀಕರಣ ಮಹಾರಾಷ್ಟ್ರದ ಪುಣೆ ಹಾಗೂ ಆಂಧ್ರಪ್ರದೇಶದ ಕಡಪ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ತಮಿಳು ಸೆಲ್ವಿ.

Write A Comment