ಸಿಂಹಳೀಯರಿಗೆ ಕುಮಾರ ‘ಸಂಗ’ ದಿಲ್‌ಖುಶ್: ಸಂಗಕ್ಕರ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಸತತ 4ನೆ ಶತಕದ ವಿಶ್ವ ದಾಖಲೆ
ಹೋಬರ್ಟ್, ಮಾ.11: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕರ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕನೆ ಶತಕ ದಾಖಲಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಅವರ ನಾಲ್ಕನೆ ಶತಕ ಮತ್ತು ದಿಲ್ಶನ್ ಶತಕದ ಸಹಾಯದಿಂದ ಶ್ರೀಲಂಕಾ ತಂಡ ಬುಧವಾರ ನಡೆದ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 148 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ವಿಶ್ವಕಪ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕದ ಸಾಧನೆ ಮಾಡಿರುವ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿ ಇತಿಹಾಸ ನಿರ್ಮಿಸಿರುವ ಸಂಗಕ್ಕರ ಮತ್ತು ಆರಂಭಿಕ ದಾಂಡಿಗ ತಿಲರತ್ನೆ ದಿಲ್ಶನ್ ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ ದಾಖಲಿಸಿದ 195 ರನ್‌ಗಳ ಸಹಾಯದಿಂದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 363 ರನ್ ಸಂಪಾದಿಸಿತ್ತು.
ಗೆಲುವಿಗೆ 364 ರನ್‌ಗಳ ಕಠಿಣ ಸವಾಲನ್ನು ಪಡೆದ ಸ್ಕಾಟ್ಲೆಂಡ್ ತಂಡ 43.1 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟಾಯಿತು.ಶ್ರೀಲಂಕಾ ಈ ಗೆಲುವಿನೊಂದಿಗೆ ಗ್ರೂಪ್ ಹಂತದಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೆ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನವನ್ನು ಪಡೆದು ಕ್ವಾರ್ಟರ್ ಫೈನಲ್ ತಲುಪಿದೆ.
ಸ್ಕಾಟ್ಲೆಂಡ್ ಆಡಿರುವ ಐದು ಪಂದ್ಯಗಳಲ್ಲೂ ಸೋಲು ಅನುಭವಿಸಿದ್ದು, ಮಾ.13ರಂದು ನ್ಯೂಝಿಲೆಂಡ್ ವಿರುದ್ಧ ಕೂಟದಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕುಮಾರ ಸಂಗಕ್ಕರ 139 ನಿಮಿಷಗಳ ಬ್ಯಾಟಿಂಗ್‌ನಲ್ಲಿ 95 ಎಸೆತಗಳನ್ನು ಎದುರಿಸಿ 13 ಬೌಂಡರಿ ಮತ್ತು 4 ಸಿಕ್ಸರ್ ನೆರವಿಲ್ಲಿ 124 ರನ್ ಗಳಿಸಿದರು. ದಿಲ್ಶನ್ 144 ನಿಮಿಷಗಳ ಬ್ಯಾಟಿಂಗ್‌ನಲ್ಲಿ 99 ಎಸಎತಗಳನ್ನು ಉತ್ತರಿಸಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 104 ರನ್ ಗಳಿಸಿ ನಿರ್ಗಮಿಸಿದರು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ವಿಶ್ವಕಪ್‌ನಲ್ಲಿ ಎರಡನೆ ಬಾರಿ ವೇಗದ ಅರ್ಧಶತಕ ದಾಖಲಿಸಿದರು. 32 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಮ್ಯಾಥ್ಯೂಸ್ 51ರನ್( 21ಎ, 1ಬೌ,6ಸಿ) ಗಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ 5.3 ಓವರ್‌ಗಳಲ್ಲಿ 21 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಆರಂಭಿಕ ದಾಂಡಿಗ ದಿಲ್ಶನ್‌ಗೆ ಸಂಗಕ್ಕರ ಜೊತೆಯಾದರು. ಇವರು ಜೊತೆಯಾಟದಲ್ಲಿ ತಂಡದ ಸ್ಕೋರ್‌ನ್ನು 34.2 ಓವರ್‌ಗಳಲ್ಲಿ 216ಕ್ಕೆ ತಲುಪಿಸಿದರು. ನಾಲ್ಕನೆ ಶತಕ: ದಿಲ್ಶನ್ 33.5ನೆ ಓವರ್‌ನಲ್ಲಿ ಕೊಟ್ಝೆರ್ ಎಸೆತದಲ್ಲಿ 1 ರನ್ ಗಳಿಸಿ ವಿಶ್ವಕಪ್‌ನಲ್ಲಿ ನಾಲ್ಕನೆ ಶತಕ ಪೂರೈಸಿದರು. 313ನೆ ಪಂದ್ಯವನ್ನಾಡಿದ 38ರ ಹರೆಯದ ದಿಲ್ಶನ್ ಅವರಿಗೆ ಇದು 22ನೆ ಏಕದಿನ ಶತಕವಾಗಿದೆ.
403ನೆ ಏಕದಿನ ಪಂದ್ಯವನ್ನಾಡಿದ ಕುಮಾರ ಸಂಗಕ್ಕರ ದಿಲ್ಶನ್ ಶತಕ ಪೂರೈಸಿದ ಬೆನ್ನಲ್ಲೆ 2015ರ ವಿಶ್ವಕಪ್‌ನಲ್ಲಿ ಸತತ ನಾಲ್ಕನೆ ಶತಕದ ದಾಖಲೆ ಬರೆದರು. 33.6ನೆ ಓವರ್‌ನಲ್ಲಿ ಕೊಟ್ಝೆರ್ ಎಸೆತದಲ್ಲಿ 2 ರನ್ ಕಬಳಿಸುವ ಮೂಲಕ ವಿಶ್ವ ದಾಖಲೆಯ ಶತಕ ಪೂರ್ಣಗೊಳಿಸಿದರು. 403ನೆ ಏಕದಿನ ಪಂದ್ಯವನ್ನ್ನಾಡಿರುವ 37ರ ಹರೆಯದ ಸಂಗಕ್ಕರ ಏಕದಿನ ಶತಕದ ದಾಖಲೆಯನ್ನು 25ಕ್ಕೆ ತಲುಪಿಸಿದರು. ದಿಲ್ಶನ್ ಅವರು 34.2ನೆ ಓವರ್‌ನಲ್ಲಿ ಡೇವಿ ಎಸೆತದಲ್ಲಿ ಮ್ಯಾಕ್ಲಿಯೋಡ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಶತಕ ದಾಖಲಿಸಿದ ಬಳಿಕ ಸಂಗಕ್ಕರ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಎವನ್ಸ್‌ರ 36ನೆ ಓವರ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಇರುವ 23 ರನ್ ಕಬಳಿಸಿದರು. ಮಹೇಲ ಜಯವರ್ಧನೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.ಕೇವಲ 2 ರನ್ ಗಳಿಸಿ ಡೇವಿಗೆ ವಿಕೆಟ್ ಒಪ್ಪಿಸಿದರು. ಜಯವರ್ಧನೆ ನಿರ್ಗಮಿಸಿದ ಬೆನ್ನಲ್ಲೇ ಸಂಗಕ್ಕರ ಔಟಾದರು.
ನಾಯಕ ಮ್ಯಾಥ್ಯೂಸ್ ಅರ್ಧಶತಕ(51), ತಿಸ್ಸರಾ ಪೆರೆರಾ 24, ಕುಲಶೇಖರ ಔಟಾಗದೆ 18 ರನ್, ಚಾಮೀರಾ ಔಟಾಗದೆ 12 ರನ್ ಗಳಿಸಿ ತಂಡ ಸ್ಕೋರ್‌ನ್ನು 363ಕ್ಕೆ ತಲುಪಿಸಿದರು.
ಮೊಮ್ಸೆನ್, ಕೊಲ್ಮನ್ ಅರ್ಧಶತಕ: ಸ್ಕಾಟ್ಲೆಂಡ್‌ಗೆ ಈ ಪಂದ್ಯದಲ್ಲಿ ಗೆಲ್ಲದಿದ್ದರೂ ಸುಲಭವಾಗಿ ಮಣಿಯಲ್ಲಿಲ್ಲ. ನಾಯಕ ಮೊಮ್ಸೆನ್ (60) ಮತ್ತು ಕೊಲ್ಮನ್ (70) ಹೋರಾಟ ನಡೆಸಿದರು. ಆದರೆ ಲಂಕಾದ ಬೌಲರ್‌ಗಳ ಸಂಘಟಿತ ದಾಳಿಯ ಮುಂದೆ ಅವರ ಹೋರಾಟ ಫಲ ನೀಡಲಿಲ್ಲ.
ಸ್ಕೋರ್ ಪಟ್ಟಿ
ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 363
ತಿರಿಮನ್ನೆ ಸಿ ಮೊಮ್ಸೆನ್ ಬಿ ಎವನ್ಸ್ 4
ದಿಲ್ಶನ್ ಸಿ ಮ್ಯಾಕ್ಲಿಯೋಡ್ ಸಿ ಡೇವಿ 104
ಸಂಗಕ್ಕರ ಸಿ ಕ್ರಾಸ್ ಬಿ ಡೇವಿ124
ಜಯವರ್ಧನೆ ಸಿ ಮ್ಯಾಕ್ಲಿಯೋಡ್ ಬಿ ಡೇವಿ 2
ಮ್ಯಾಥ್ಯೂಸ್ ಸಿ ಕೊಲ್ಮಾನ್ ಬಿ ಮಾಚನ್ 51
ಪೆರೆರಾ ಸಿ ಮ್ಯಾಕ್ಲಿಯೋಡ್ ಬಿ ಟೇಲರ್ 24
ತಿಸ್ಸರಾ ಪೆರೆರಾ ಸಿ ಕೊಲ್ಮಾನ್ ಬಿ ಬೆರ್ರಿಂಗ್ಟನ್ 7
ಎಸ್.ಪ್ರಸನ್ನ ಸಿ ಕೊಲ್ಮಾನ್ ಬಿ ಎವನ್ಸ್ 3
ಕುಲಶೇಖರ ಔಟಾಗದೆ 18
ಮಾಲಿಂಗ ಸಿ ಲೆಹಾಸ್ಕ್ ಬಿ ಬೆರ್ರಿಂಗ್ಟನ್ 1
ಚಾಮೀರಾ ಔಟಾಗದೆ 12
ಇತರ 13
ವಿಕೆಟ್ ಪತನ: 1-21, 2-216, 3-244, 4-244, 5-289, 6-326, 7-328, 8-331, 9-336.
ಬೌಲಿಂಗ್ ವಿವರ
ಟೇಲರ್ 10-0-46-1
ಎವನ್ಸ್ 10-0-72-2
ಡೇವಿ 8-0-63-3
ಬೆರ್ರೀಂಗ್ಟನ್ 6.1-0-31-2
ಲೆಹಾಸ್ಕ್7-0-63-0
ಕೊಟ್ಝೆರ್ 4.5-0-39-0
ಮಾಚನ್ 4-0-46-1
ಸ್ಕಾಟ್ಲೆಂಡ್ 43.1 ಓವರ್‌ಗಳಲ್ಲಿ ಆಲೌಟ್ 215
ಕೊಟ್ಝೆರ್ ಸಿ ಆ್ಯಂಡ್ ಬಿ ಮಾಲಿಂಗ 0
ಮ್ಯಾಕ್ಲಿಯೋಡ್ ಬಿ ಕುಲಶೇಕರ 11
ಮಾಚನ್ ಎಲ್‌ಬಿಡಬ್ಯು ಬಿ ದಿಲ್ಶನ್ 19
ಮೊಮ್ಸೆನ್ ಸಿ ತಿರಿಮನ್ನೆ ಬಿ ಪೆರೆರಾ 60
ಕೊಲ್ಮಾನ್ ಸಿ ಪೆರೆರಾ ಬಿ ಕುಲಶೇಖರ 70
ಬೆರ್ರಿಂಗ್ಟನ್ ಸಿ ಕುಲಶೇಖರ ಬಿ ಚಾಮೀರಾ 29
ಲಿಹಾಸ್ಕ್ ಸಿ ಸಂಗಕ್ಕರ ಬಿ ಕುಲಶೇಖರ 2
ಎಂಎಚ್ ಕ್ರಾಸ್ ಸಿ ಸಂಗಕ್ಕರ ಬಿ ಚಾಮೀರಾ 7
ಆರ್ ಟೇಲರ್ ಸಿ ಪೆರೆರಾ ಬಿ ಮಾಲಿಂಗ 3
ಜೆಎಚ್ ಡೇವಿ ಸಿ ತಿರಿಮನ್ನೆ ಬಿ ಚಾಮೀರಾ 4
ಎಸಿ ಎವನ್ಸ್ ಔಟಾಗದೆ 1
ಇತರ 9
ವಿಕೆಟ್ ಪತನ: 1-0, 2-26, 3-44, 4-162, 5-189, 6-192, 7-200, 8-209, 9-210, 10-215.
ಬೌಲಿಂಗ್ ವಿವರ
ಮಾಲಿಂಗ 9-0-29-2
ಕುಲಶೇಖರ 7-0-20-3
ತಿಸ್ಸರ ಪೆರೆರಾ 7-0-41-1
ದಿಲ್ಶನ್ 5-0-15-1
ಪ್ರಸನ್ನ 8-0-57-0
ಚಾಮೀರಾ 7.1-0-51-3
ಪಂದ್ಯಶ್ರೇಷ್ಠ: ಕುಮಾರ ಸಂಗಕ್ಕರ.