ಮನೋರಂಜನೆ

ಆಕರ್ಷಕ ಶತಕ ಸಿಡಿಸಿದ ಶಿಖರ್ ಧವನ್

Pinterest LinkedIn Tumblr

Shikar

ಸೆಡನ್ ಪಾರ್ಕ್, ಹ್ಯಾಮಿಲ್ಟನ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಕರ್ಷಕ ಶತಕ ಸಿಡಿಸಿದ್ದಾರೆ.

ಆರಂಭಿಕರಾಗಿ ಕಣಕ್ಕೀಳಿದ ಶಿಖರ್ ಧವನ್ ರೋಹಿತ್ ಶರ್ಮಾರೊಂದಿಗೆ ಉತ್ತಮ ಜತೆಯಾಟವಾಡಿ 84 ಎಸೆತಗಳಲ್ಲಿ 100 ರನ್ ಗಳಿಸಿದ್ದಾರೆ. ಇದರಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿದೆ. ವಿಶ್ವಕಪ್ ನಲ್ಲಿ ಶಿಖರ್ ಧವನ್ ರ 2ನೇ ಶತಕ ಇದಾಗಿದೆ.

ಮೊದಲು ಬ್ಯಾಟ್ ಮಾಡಿ ಐರ್ಲೆಂಡ್ 259 ರನ್ ಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಗೆಲುವಿನತ್ತ ಮುಖ ಮಾಡಿದೆ.

Write A Comment