‘ಬಾಲಿವುಡ್‌ನ ಬಹುನಿರೀಕ್ಷಿತ ‘ಎನ್‌ಎಚ್10’ ಚಿತ್ರಕ್ಕೆ ನಾಯಕಿಯ ಹುಡುಕಾಟ ಪ್ರಾರಂಭಿಸಲು ಹೊರಟಾಗ ಅನುಷ್ಕಾ ಶರ್ಮಾ ನನ್ನ ಮೊದಲ ಹಾಗೂ ಕೊನೆಯ ಆಯ್ಕೆಯಾಗಿದ್ದರು’ ಎಂದಿದ್ದಾರೆ ನಿರ್ದೇಶಕ ನವದೀಪ್ ಸಿಂಗ್.
‘ಅನುಷ್ಕಾಗೆ ಮಾಡುವ ಕೆಲಸದಲ್ಲಿ ತುಂಬಾ ಶ್ರದ್ಧೆ ಇದೆ. ಉತ್ತಮ ನಟನಾ ಕೌಶಲವನ್ನು ಹೊಂದಿರುವ ಆಕೆ ಈ ಚಿತ್ರಕ್ಕೆ ಹೇಳಿ ಮಾಡಿಸಿದ ನಟಿ’ ಎಂದು ಎನ್‌ಎಚ್10 ಚಿತ್ರದ ನಿರ್ದೇಶಕ ನವದೀಪ್ ಐಎಎನ್‌ಎಸ್‌ಗೆ ನೀಡಿರುವ ಸಂದರ್ಶನಲ್ಲಿ ಹೇಳಿದ್ದಾರೆ.
‘ಈ ಚಿತ್ರದಲ್ಲಿ ನಟಿ ಅನುಷ್ಕಾಗೆ ಜೋಡಿಯಾಗಿ ಶೈತಾನ್ ಹಾಗೂ ‘ನೊ ಒನ್ ಕಿಲ್ಡ್ ಜೆಸಿಕಾ’ ಚಿತ್ರದಲ್ಲಿ ಅಭಿನಯಿಸಿರುವ ನೀಲ್ ಭೂಪಾಲಂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅನುಷ್ಕಾ ತುಂಬಾ ಚೆನ್ನಾಗಿ ಅಭಿನಯಿಸಿದ್ದು, ಇದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಎರಡು ಮಾತಿಲ್ಲ’ ಎಂದಿದ್ದಾರೆ ಅವರು.
‘ಈ ಚಿತ್ರದ ಕಥೆ ನೈಜವಾಗಿದ್ದು, ತುಂಬಾ ಚೆನ್ನಾಗಿದೆ. ಈ ಚಿತ್ರವನ್ನು ಎಲ್ಲರೂ ನೋಡಬೇಕೆಂಬ ಆಸೆಯಿಂದ ಮಾಡಿದ್ದೇನೆ. ಆದರೆ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿರುವುದು ಸ್ವಲ್ಪ ಬೇಸರ ತಂದಿದೆ’ ಎಂದು ನೊಂದು ನುಡಿದ್ದಿದ್ದಾರೆ ನವದೀಪ್.
‘ಬ್ಯಾಂಡ್‌ಬಾಜಾ ಬಾರಾತ್’, ‘ರಬ್ ನೆ ಬನಾದಿ ಜೋಡಿ’ ಚಿತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದ ಅನುಷ್ಕಾ ‘ಎನ್‌ಎಚ್10’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
