ಮನೋರಂಜನೆ

ಹರಿಣಗಳಿಗೆ ಗೇಲ್ ಎಂಬ ಬಿರುಗಾಳಿಯ ಭಯ

Pinterest LinkedIn Tumblr

Gayle

ಸಿಡ್ನಿ , ಫೆ.26: ಪಾಯಿಂಟ್ಸ್ ಪಟ್ಟಿಯಲ್ಲಿ ದುರ್ಬಲ ಐರ್ಲೆಂಡ್‌ಗಿಂತ ಕೆಳಮಟ್ಟದಲ್ಲಿ ರುವ ದಕ್ಷಿಣ ಆಫ್ರಿಕಾಕ್ಕೆ ಈಗ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರಿಸ್‌ಗೇಲ್ ಎಂಬ ಬಿರುಗಾಳಿಯ ಭಯವೂ ಆವರಿಸಿದೆ. ನಾಳೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎಬಿಡಿವಿಲಿಯರ್ಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಜೆಸ್ಟಿನ್ ಹೋಲ್ಡರ್ ಸಾರಥ್ಯದ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸುತ್ತಿದ್ದು ಕ್ರಿಸ್‌ಗೇಲ್, ಮ್ಯಾರೂಲ್ ಸ್ಯಾಮುಯಲ್ಸ್ ರಂತಹ ಸ್ಫೋಟಕ ಬ್ಯಾಟ್ಸ್ ಮನ್‌ಗಳ ಕಟ್ಟಿ ಹಾಕಲು ರಣತಂತ್ರವನ್ನು ಹೆಣೆಯುತ್ತಿದೆ.

ಆರಂಭಿಕ ಪಂದ್ಯದಲ್ಲೇ ದುರ್ಬಲ ಜಿಂಬಾಬ್ವೆ ವಿರುದ್ಧ ಜೆಪಿ ಡುಮಿನಿ ಹಾಗೂ ಡೇವಿಡ್ ಮಿಲ್ಲರ್‌ರ ದಾಖಲೆಯ ಜೊತೆಯಾಟದ ನೆರವಿನಿಂದ 339 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಕೇವಲ 177 ರನ್‌ಗಳಿಗೆ ಅಲೌಟ್ ಆಗುವ ಮೂಲಕ ಬ್ಯಾಟ್ಸ್‌ಮನ್‌ಗಳು ತಮ್ಮ ಲಯವನ್ನು ಕಳೆದುಕಂಡಿರುವುದು ಗೋಚರಿಸಿದೆ.

ದಕ್ಷಿಣ ಆಫ್ರಿಕಾಕ್ಕೆ ವೇಗಿ ಪಿಲೆಂಡರ್‌ರ ಅನುಪಸ್ಥಿತಿ ಹಾಗೂ ಸ್ಟಾರ್ ಬೌಲರ್‌ಗಳಾದ ಡೇನ್ ಸ್ಟೇನ್, ಮಾರ್ಕಲ್‌ರವರು ಕೂಡ ದುಬಾರಿ ಆಗುತ್ತಿರುವುದು ಕೂಡ ಎಬಿ ಡಿವಿಲಿಯರ್ಸ್‌ಗೆ ನುಂಗಲಾರದ ತುತ್ತಾಗಿದೆ. ಇನ್ನು ವೆಸ್ಟ್‌ಇಂಡೀಸ್ ಸ್ಥಿತಿ ತದ್ವಿರುದ್ಧವೆನ್ನುವಂತಿದೆ ತಾನು ಆಡಿದ ಮೊದಲ ಪಂದ್ಯದಲ್ಲೇ ಐರ್ಲೆಂಡ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಹೋಲ್ಡರ್ ಪಡೆ ನಂತರ ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧ ವಿರೋಚಿತ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧ ಕ್ರಿಸ್‌ಗೇಲ್ (215) ಹಾಗೂ ಮ್ಯಾರೂಲ್ ಸ್ಯಾಮುಯಲ್ಸ್‌ರ ಶತಕ (133*)ದ ನೆರವಿನಿಂದ ಹಾಗೂ ಬೌಲರ್‌ಗಳ ಕರಾರುವಾಕ್ಕಾದ ಆಟದಿಂದ ಗೆದ್ದು ಬೀಗಿದ್ದಾರೆ. ಫೀಲ್ಡಿಂಗ್‌ನಲ್ಲಿ ವಿಭಾಗದಲ್ಲೂ ವೆಸ್ಟ್ ಇಂಡೀಸ್ ಆಟಗಾರರಿಗಿಂತ ದಕ್ಷಿಣ ಆಫ್ರಿಕಾದ ಫೀಲ್ಡರ್‌ಗಳು ದುರ್ಬಲರಾಗಿದ್ದಾರೆ ಎಂಬುದು ಭಾರತ ವಿರುದ್ಧದ ಪಂದ್ಯದಲ್ಲೇ ಸಾಬೀತಾಗಿದೆ.

ನಾಳೆಯ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಆಗ್ರಸ್ಥಾನಿಯಾಗಲು ಸಜ್ಜಾಗಿರುವ ವಿಂಡೀಸ್ ಆಟಗಾರರು ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ. ನಾಳಿನ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ.

Write A Comment