ನಯನತಾರ ಬಾಯ್ ಫ್ರೆಂಡ್ ಲಿಸ್ಟಿಗೆ ಹೊಸ ಹುಡುಗನ ಸೇರ್ಪಡೆಯಾಗಿದೆ. ಹೊಸ ಹುಡುಗನ ಹೆಸರು ಗಣೇಶ್ ವೆಂಕಟರಾಮನ್. ಕಾಲಿವುಡ್ ಅಂಗಳದಿಂದ ಬಂದಿರುವ ಈ ಗಾಳಿಸುದ್ದಿಯನ್ನು ನಂಬುವುದಾದರೆ, ಗಣೇಶ್ ಈಕೆಯ ಕೊನೆಯ ಬಾಯ್ ಫ್ರೆಂಡ್ ಆಗಲಿದ್ದಾನಂತೆ.
ಅತ್ಯಂತ ಚರ್ಚಿತವಾಗಿದ್ದ ನಟ ಸಿಂಬು ಮತ್ತು ನಯನತಾರ ನಡುವಣ ಅಫೇರು ಇದ್ದಕ್ಕಿದ್ದಂತೆ ಮುರಿದುಬಿದ್ದಾಗ ಅಭಿಮಾನಿಗಳು ಸಿಂಬುವನ್ನು ವಿಲನ್ನಂತೆ ಕಂಡಿದ್ದವು. ಅವರಿಬ್ಬರ
ಅಧರಚುಂಬನ ಫೆಟೋಗಳೂ ಇಂಟರ್ನೆಟ್ಟಿನಲ್ಲಿ ಹರಿದಾಡಿದ್ದವು. ಆ ನಂತರ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವಾನನ್ನು ಮದುವೆಯಾಗ್ತೀನಿ ಎಂದು ಹೇಳಿಕೆ ಕೊಟ್ಟು ಜೊತೆ ಓಡಾಡತೊಡಗಿದಾಗ, ಅಭಿಮಾನಿಗಳು ಅದಕ್ಕೂ ಜೈ ಅಂದಿದ್ದರು.
ಆದರೆ ಪ್ರಭುದೇವಾಗೆ ಕಾರಣ ನೀಡದೇ ಸಂಬಂಧದಿಂದ ಹೊರಬಂದಿದ್ದ ನಯನತಾರ ಈಗ ಮೂರಕ್ಕೆ ಮುಕ್ತಾಯ ಎಂಬಂತೆ ಗಣೇಶ್ ಹಿಂದೆ ಬಿದ್ದಿದ್ದಾಳೆ. ಜಯಂ ರವಿ ಜೊತೆ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಗಣೇಶ್ ಈಕೆಯ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಹಳೇ ಬಾಯ್ ಫ್ರೆಂಡ್ ಸಿಂಬು-ಹನ್ಸಿಕಾ ಅಫೇರ್ ನೋಡಿ ಹೊಟ್ಟೆ ಉರಿಯಿಂದ ನಯನತಾರ ಅರ್ಜೆಂಟಾಗಿ ಒಬ್ಬ ಬಾಯ್ ಫ್ರೆಂಡ್‍ನನ್ನು ಹುಡುಕಿಕೊಂಡಿದ್ದಾಳೆಂದು ಕಾಲಿವುಡ್ ಕುಹಕವಾಡುತ್ತಿದೆ.