ಮನೋರಂಜನೆ

ಕುಣಿಯುವುದೇ ಖುಷಿ ಮಲೈಕಾ ಅರೋರಾ ಖಾನ್‌

Pinterest LinkedIn Tumblr

psmec24malaika

ನನಗೆ ಡಾನ್ಸ್‌ ಮಾಡುವುದು ತುಂಬಾ ಇಷ್ಟ. ಅದಕ್ಕೇ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುತ್ತೇನೆ. ಅದಕ್ಕಾಗಿ ನಾನು  ಕ್ಷಮೆ ಕೇಳುವ ಅಗತ್ಯ ಇಲ್ಲ ಎಂದಿದ್ದಾರೆ ಐಟಂ ಸಾಂಗ್‌ ಕ್ವೀನ್‌ ಮಲೈಕಾ ಅರೋರಾ ಖಾನ್‌.

‘ಒರಟು ಒರಟಾದ ಹಾಡುಗಳಿಗೆ ಹೆಜ್ಜೆ ಹಾಕುವುದು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ನಾನು ಖುಷಿಯಿಂದ ಮಾಡುತ್ತೇನೆ’ ಎನ್ನುತ್ತಾರೆ ಅವರು.

‘ದಿಲ್‌ ಸೆ’ ಚಿತ್ರದಲ್ಲಿ ‘ಚೈಯಾ ಚೈಯಾ’, ‘ಹೌಸ್‌ ಫುಲ್‌ 2’ನಲ್ಲಿ ‘ಅರ್ನಾಕಲಿ ಡಿಸ್ಕೊ ಚಲಿ’, ‘ದಬಂಗ್‌’ನಲ್ಲಿ ‘ಮುನ್ನಿ ಬದನಾಮ್‌ ಹುಯಿ’, ‘ವೆಲ್‌ಕಮ್‌’ ಚಿತ್ರದಲ್ಲಿ ‘ಹೋಂಟ್‌ ರಸೀಲೆ’ಯಂತಹ ಐಟಂ ಹಾಡುಗಳಿಗೆ ಕುಣಿದಿರುವ ಮಲೈಕಾ ಈಗ ‘ಡಾಲಿ ಕಿ ಡೋಲಿ’ ಚಿತ್ರದಲ್ಲಿ ‘ಫ್ಯಾಷನ್‌ ಖತಂ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ತಾನು ಹಾಗೂ ಪತಿ ಅರ್ಬಾಸ್‌ ಖಾನ್‌ ನಿರ್ಮಿಸಿರುವ ‘ಡಾಲಿ ಕಿ ಡೋಲಿ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಮಲೈಕಾ, ‘ನಾನು ಈಗ ನಿರ್ಮಾಪಕಿಯಾಗಿ ಖುಷಿಯಾಗಿದ್ದೇನೆ. ಸದ್ಯಕ್ಕೆ ಚಿತ್ರಗಳಲ್ಲಿ ಅಭಿನಯಿಸುವ ಆಲೋಚನೆ ಇಲ್ಲ. ನಾನು ನಟಿಸುವುದನ್ನು ಎಂಜಾಯ್‌ ಮಾಡುವುದಿಲ್ಲ’ ಎಂದಿದ್ದಾರೆ 41 ವರ್ಷದ ವರ್ಷದ ನಟಿ.

Write A Comment