ಮನೋರಂಜನೆ

ತ್ರಿಕೋನ ಏಕದಿನ ಸರಣಿ: ಇಂಗ್ಲೆಂಡ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ; ಎರಡನೇ ಪಂದ್ಯದಲ್ಲೂ ಭಾರತಕ್ಕೆ ಸೋಲು

Pinterest LinkedIn Tumblr

England_APDC

ಬ್ರಿಸ್ಬೇನ್: ತ್ರಿಕೋನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಸೋಲಾಗಿದೆ. 154 ರನ್‍ಗಳ ಸುಲಭದ ಗುರಿಯನ್ನು ಬೆನ್ನೆಟ್ಟಿದ ಇಂಗ್ಲೆಂಡ್ 9 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ.

ಇಯಾನ್ ಬೆಲ್ (91 ಎಸೆತ,8 ಬೌಂಡರಿ) ಜೇಮ್ಸ್ ಟೈಯ್ಲರ್ 56 ರನ್ (63 ಎಸೆತ,4 ಬೌಂಡರಿ) ರನ್ ಗಳಿಸುವ ಮೂಲಕ ಇಂಗ್ಲೆಂಡ್ ಇನ್ನು 135 ಎಸೆತ ಇರುವಂತೆಯೇ ವಿಜಯದ ನಗೆ ಬೀರಿತು.

25 ರನ್ ಗಳಿಸಿದ್ದ ವೇಳೆ ಆಲಿ ಔಟಾದಾಗ ಭಾರತ ಪ್ರತಿರೋಧ ನೀಡುತ್ತಿದೆ ಎಂದೇ ನಿರೀಕ್ಷಿಸಲಾಗಿತ್ತು .ಆದರೆ ಮುರಿಯದ ಎರಡನೇ ವಿಕೆಟ್ ಗೆ ಬೆಲ್ ಮತ್ತು ಟೈಯ್ಲರ್ 128 ರನ್ ಒಟ್ಟುಗೂಡಿಸುವ ಮೂಲಕ ಇಂಗ್ಲೆಂಡ್‍ಗೆ ಸುಲಭದ ಜಯ ಸಿಗುವಂತೆ ಮಾಡಿದರು. ಭಾರತದ ಪರವಾಗಿ ವಿಶ್ವಕಪ್‍ಗೆ ಆಯ್ಕೆಯಾದ ಕರ್ನಾಟಕ ಸ್ಟುವರ್ಟ್ ಬಿನ್ನಿ ಒಂದು ವಿಕೆಟ್ ಪಡೆಯಲು ಯಶಸ್ವಿಯಾದರು.

ಫಿನ್ ಬೌಲಿಂಗ್ ಗೆ ಭಾರತ ತತ್ತರ: ಸ್ಟೀವನ್ ಫಿನ್ ಅವರ ಬೌಲಿಂಗ್ ತತ್ತರಿಸಿದ ಭಾರತ ಕೇವಲ 39.3 ಓವರ್‍ಗಳಲ್ಲಿ ಸರ್ವಪತನ ಕಂಡಿತು. 19 ಓವರ್‍ನಲ್ಲೇ 5 ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರ 20 ಓವರ್‍ನಲ್ಲಿ 5 ವಿಕೆಟ್ ಕಳೆದುಕೊಳ್ಳುವ ಮೂಲಕ 153 ರನ್‍ಗೆ ಆಲೌಟ್ ಆಯಿತು.

ಸ್ಟೀವನ್ ಫಿನ್ 8 ಓವರ್‍ಗಳಲ್ಲಿ 33 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಆಗ್ರ ಬ್ಯಾಟ್ಸ್‍ಮ್ಯಾನ್‍ಗಳನ್ನು ಪೆವಿಲಿಯನ್‍ಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಅಂಜಿಕ್ಯ ರೆಹಾನೆ, ಅಂಬಟಿ ರಾಯಿಡು,ಧೋನಿ, ಸ್ಟುವರ್ಟ್ ಬಿನ್ನಿ ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಆಟಗಾರರು ಪ್ರತಿರೋಧ ತೊರಲೇ ಇಲ್ಲ. ಒಟ್ಟು ಮೊತ್ತದ 153ರನ್‍ಲ್ಲಿ ಆರು ಆಟಗಾರು ಎರಡಂಕಿ ಸಹ ದಾಟಲೇ ಇಲ್ಲ. ಫಿನ್ 5 ವಿಕೆಟ್ ಕಬಳಿಸಿದರೆ, ಆಂಡರ್ಸನ್ 4 ವಿಕೆಟ್ ಪಡೆದರು.

ಯಾರು ಎಷ್ಟು ರನ್ ಹೊಡೆದಿದ್ದಾರೆ? ಅಂಜಿಕ್ಯ ರೆಹಾನೆ 33( 40 ಎಸೆತ, 1 ಬೌಂಡರಿ. 1 ಸಿಕ್ಸರ್)ಶಿಖರ್ ಧವನ್ 1,ಅಂಬಟಿ ರಾಯಿಡು 23(53 ಎಸೆತ, 2 ಬೌಂಡರಿ) ಸುರೇಶ್ ರೈನಾ 1, ಧೋನಿ 34( 61 ಎಸೆತ, 1 ಬೌಂಡರಿ,ಸ್ಟುವರ್ಟ್ ಬಿನ್ನಿ 44( 55 ಎಸೆತ, 3 ಬೌಂಡರಿ, 2 ಸಿಕ್ಸರ್, ಅಕ್ಸರ್ ಪಟೇಲ್ 0, ಭುವನೇಶ್ವರ್ ಕುಮಾರ್ 5, ಮಹಮ್ಮದ್ ಶಮಿ 1, ಉಮೇಶ್ ಯಾದವ್ ಔಟಾಗದೇ 0.

Write A Comment