ಮನೋರಂಜನೆ

ಲವ್ ಯೂ ಆಲಿಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ಶಕೀಲಾ: ಇಂದ್ರಜಿತ್‌ಗೆ ಲಕ್ಕಿ ಚಾರ್ಮ್

Pinterest LinkedIn Tumblr

shakeela-clevage-cinemas

ನಿಜ ಜೀವನದಲ್ಲಿ ಲಕ್ಕಿ ಚಾರ್ಮ್ ಕೆಲಸ ಮಾಡುತ್ತದೋ ಇಲ್ಲವೋ ಆದರೆ ಚಿತ್ರರಂಗದಲ್ಲಿ ಮಾತ್ರ ಅದರ ನಂಬಿಕೆ ಗಾಢವಾಗಿ ನೆಲೆಯೂರಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಾಲಿಗೆ ಐಟಂ ಡಾನ್ಸರ್ ಶಕೀಲಾ ಲಕ್ಕಿ ಚಾರ್ಮ್ ಆಗಿದ್ದಾರೆ. ಅದಕ್ಕೆ ಇನ್ನೊಂದು ಕಂಡೀಷನ್ ಇದೆ. ಅದೇನೆಂದರೆ ಮಲೆಯಾಳಂ ನಟಿ ಶಕೀಲಾ ಚಿತ್ರದಲ್ಲಿ ನಟಿಸಿದರೆ ಅದೃಷ್ಟ ಎಂದು ಇಂದ್ರಜಿತ್ ನಂಬಿದ್ದಾರೆ.

ಅದಕ್ಕಾಗಿಯೇ, ತಮ್ಮ ಹೊಸ ಪ್ರಾಜೆಕ್ಟ್ ಲವ್ ಯೂ ಆಲಿಯಾ ಚಿತ್ರದಲ್ಲಿ ಶಕೀಲಾರಿಗೆ ಒಂದು ಪ್ರಮುಖ ಪಾತ್ರ ನೀಡಿದ್ದಾರೆ. ಹತ್ತು ವರ್ಷದ ಹಿಂದೆ ಮೊನಾಲಿಸಾ ಚಿತ್ರ ನಿರ್ದೇಶಿಸಿದಲೂ ಶಕೀಲಾರಿಗೆ ಒಂದು ಪಾತ್ರವನ್ನು ನೀಡಿದ್ದರು ಇಂದ್ರಜಿತ್. ಈಗ ಮತ್ತೆ ಕಾಸ್ಟ್ ಮಾಡಿದ್ದಾರೆ. ‘ಶಕೀಲಾ ಮೇಡಮ್ ಅಭಿನಯಿಸಿದ ನನ್ನ ಸಿನಿಮಾ ದೊಡ್ಡ ಯಶಸ್ಸನ್ನು ಕಂಡಿತು. ಹಾಗಾಗಿ ಅವರು ಒಂದು ರೀತಿಯಲ್ಲಿ ನನ್ನ ಪಾಲಿಗೆ ಅದೃಷ್ಟ ಅಂತ ಭಾವಿಸಿದ್ದೇನೆ. ಅವರಿಗೆ ತುಂಬಾ ಅಭಿಮಾನಿಗಳೂ ಇದ್ದಾರೆ. ಲವ್ ಯೂ ಆಲಿಯಾ ಚಿತ್ರದಲ್ಲಿ ಅವರಿಗೆ ಸೂಕ್ತವಾದ ಪಾತ್ರವಿದೆ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

ಇಂದ್ರಜಿತ್ ಲಂಕೇಶ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಶಕೀಲಾ ಹರ್ಷ ವ್ಯಕ್ತಪಡಿಸಿದ್ದಾರೆ. ’10 ವರ್ಷದ ಹಿಂದೆ ಅವರ ನಿರ್ದೇಶನದಲ್ಲಿ ನಟಿಸುವಾಗ ಬಹಳ ಖುಷಿಯಾಗಿತ್ತು. ಈಗಲೂ ಅಷ್ಟೆ. ನನಗೆ 100% ಕಾಮಿಡಿ ರೋಲ್ ಕೊಟ್ಟಿದ್ದಾರೆ. ಸಾಧು ಕೋಕಿಲಾ ಜತೆ ನಾನು ನಟಿಸುತ್ತಿದ್ದೇನೆ. ಮೊದಲ ಬಾರಿಗೆ ರವಿಚಂದ್ರನ್ ಜತೆ ನಟಿಸುತ್ತಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಮೊದಲು ಅವರನ್ನು ಭೇಟಿಯಾಗುವಾಗ ಬಹಳ ಭಯವಾಗಿತ್ತು. ನಾನು ಅವರ ಕೆಲಸವನ್ನು ಎಷ್ಟು ಇಷ್ಟಪಡುತ್ತೇನೆಅಂದರೆ ಅದನ್ನು ಪದಗಳಲ್ಲಿ ಕಟ್ಟಿ ಕೊಡುವುದಕ್ಕೆ ಕಷ್ಟವಾಗುತ್ತದೆ’ ಎನ್ನುತ್ತಾರೆ ಶಕೀಲಾ.

ಇಮೇಜ್ ಮೇಕ್‌ಓವರ್
ಹಾಗೆಯೇ, ಇತ್ತೀಚೆಗೆ ಕನ್ನಡದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಶಕೀಲಾ ಇಮೇಜ್ ಮೇಕ್‌ಓವರ್‌ನತ್ತ ಗಮನ ಹರಿಸಿದ್ದಾರೆ. ಅವರು ನಿರ್ದೇಶಕಿಯ ಹ್ಯಾಟ್ ಧರಿಸಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಹಾಗೆಯೇ ಗಂಭೀರವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುವುದರತ್ತಲೂ ಅವರು ಮನಸ್ಸು ಮಾಡಿದ್ದಾರೆ. ನಾಲ್ಕು ವರ್ಷದ ಹಿಂದೆಯೂ ಒಂದು ಕನ್ನಡ ಚಿತ್ರದಲ್ಲಿ ಶಕೀಲಾ ನಟಿಸಿದ್ದರು. ಈಗ ಇಂದ್ರಜಿತ್ ಚಿತ್ರದಲ್ಲಿ ನರ್ಸ್ ಭೂಮಿಕೆ ನಿಭಾಯಿಸುತ್ತಿದ್ದಾರೆ. ‘ಕನ್ನಡದ ರಿಯಾಲಿಟಿ ಶೋ ತಮ್ಮ ಹಳೆಯ ಇಮೇಜನ್ನು ಪೂರ್ಣ ಬದಲಾಯಿಸಿತೆಂದು ಹೇಳಲಾಗದಿದ್ದರೂ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ’ ಎನ್ನುತ್ತಾರೆ ಶಕೀಲಾ.

Write A Comment