ಮನೋರಂಜನೆ

ಯೂಟ್ಯೂಬಲ್ಲಿ ಸೂಪರ್‌ಹಿಟ್ ಆಗುತ್ತಿರುವ ಹುಚ್ಚ ವೆಂಕಟ

Pinterest LinkedIn Tumblr

venkat

ತನ್ನ ಸಿನಿಮಾ ನೋಡೋಕೆ ಜನ ಜರ್ತಾ ಇಲ್ಲ ಅನ್ನೋ ಕೋಪವನ್ನು ಮಾಧ್ಯಮದ ಮುಂದೆ ಸಿನಿಮೀಯವಾಗಿಯೇ ವ್ಯಕ್ತಪಡಿಸಿದ್ದ ನಟ ನಿರ್ದೇಶಕ ವೆಂಕಟ್‌ನ ಆ ಮಾಧ್ಯಮ ಹೇಳಿಕೆಯ ತುಣುಕು ಯೂಟ್ಯೂಬಿನಲ್ಲಿ ಭರ್ಜರಿ ಹಿಟ್ ಆಗಿದೆ.

ನ. 28ರಂದು ಅಪ್‌ಲೋಡ್ ಆಗಿರುವ ಆ ವಿಡಿಯೋ ಕೇವಲ ಹದಿನೆಂಟು ದಿನಗಳಲ್ಲಿ 59 ಸಾವಿರ ಹಿಟ್ಸ್ ಪಡೆದದ್ದಲ್ಲದೆ, ವಾಟ್ಸ್ ಆ್ಯಪ್ ಮೂಲಕ ಸಹಸ್ರಾರು ಮಂದಿಯನ್ನು ತಲುಪಿದೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಮೋಸ್ಟ್ ಫನ್ನಿ ವೀಡಿಯೋ ಎಂಬಂತೆ ಹರಿದಾಡುತ್ತಿದ್ದರೆ, ಕೆಲವರು ವೆಂಕಟ್ ಬಗ್ಗೆ ಮರುಕ ಕೂಡ ತೋರಿ, ಸಿನಿಮಾ ನೋಡುವ ನಿರ್ಧಾರ ಮಾಡಿದ್ದಾರೆ.

ವೆಂಕಟ್‌ನ ಸಂದರ್ಶನದ ಹಳೆಯ ವಿಡಿಯೋಗಳು, ಹುಚ್ಚ ವೆಂಕಟ್ ಚಿತ್ರದ ಹಾಡುಗಳು ಕೂಡ ಈಗಾಗಲೇ ಯೂಟ್ಯೂಬ್‌ನಲ್ಲಿ ಹಿಟ್ಸ್ ಪಡೆದುಕೊಳ್ಳಲಾರಂಭಿಸಿವೆ. ವೆಂಕಟ್‌ನ ಅರ್ಥ ಆಯ್ತಾ ಡೈಲಾಗ್ ಈಗ ಸ್ಯಾಂಡಲ್‌ವುಡ್‌ನಲ್ಲಿ ವರ್ಲ್ಡ್ ಫೇಮಸ್ ಆಗಿದ್ದು. ಸದ್ಯದಲ್ಲೇ ಈ ಶೀರ್ಷಿಕೆಯ ಸಿನಿಮಾ ಬಂದರೂ ಅಚ್ಚರಿಯಿಲ್ಲ.

ವೆಂಕಟ್ ಮಾತನಾಡಿರುವ ಶೈಲಿಯನ್ನು ಬಳಿಸಿ ಅದೇ ಥರದ ಅನುಕರಣಾ ಆಡಿಯೋ ಬಿಟ್‌ಗಳು ಕೂಡ ಬಗೆಬಗೆಯಲ್ಲಿ ಸಿದ್ಧಗೊಳ್ಳುತ್ತಿದ್ದು, ವೆಂಕಟ್‌ನ ಮೊದಲ ಚಿತ್ರ ಸ್ವತಂತ್ರಪಾಳ್ಯಕ್ಕೂ ದಿಢೀರ್ ಬೇಡಿಕೆ ಬಂದಿದ್ದು, ಯೂಟ್ಯೂಬ್‌ನಲ್ಲಿ ಅದನ್ನೂ ಕೂಡ ಕನ್ನಡಿಗರು ಜಾಲಾಡಿರುವುದರ ಸುಳಿವು ಸಿಕ್ಕಿದೆ.

ಹೀಗಾಗಿ ಹುಚ್ಚ ವೆಂಕಟ ಮರುಬಿಡುಗಡೆಯಾಗಿ ಹಿಟ್ ಆದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಅಥವಾ ಯೂಟ್ಯೂಬ್ ಅಥವಾ ಮೊಬೈಲಿನಲ್ಲಿ ಪೇಯ್ಡ್ ವೀಡಿಯೋ ಥರ ಬಿಡುಗಡೆಗೊಳಿಸಿದರೂ ಅದು ಲಾಭ ಗಳಿಸುವುದು ಖಚಿತ ಎನ್ನುತ್ತಿದ್ದಾರೆ ಇದೀಗ ತಾನೇ ಹುಟ್ಟಿಕೊಂಡಿರುವ ವೆಂಕಟ್ ವೀಡಿಯೋ ನೋಡಿಲ್ಲವಾದಲ್ಲಿ ಒಮ್ಮೆ ಭೇಟಿಕೊಡಿ:

Write A Comment