ಮನೋರಂಜನೆ

‘ಮನ್ನತ್’ಗೆ ಪ್ರವೇಶಿಸಲು ಶಾರುಖ್ ಗೇ ತಡೆಯೊಡ್ಡಿದ್ರು!

Pinterest LinkedIn Tumblr

shah-shah-rukh

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ತನ್ನ ಮನೆ ‘ಮನ್ನತ್’ ಗೆ ಪ್ರವೇಶಿಸುವ ವೇಳೆ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಆತನಿಗೆ ತಡೆಯೊಡ್ಡಿದ್ದಾರೆ! ಸೆಕ್ಯೂರಿಟಿ ಗಾರ್ಡ್ಗಳು ಶಾರುಖ್ ರನ್ನು ಮನೆ ಮುಂದೆಯೇ ತಡೆ ಹಿಡಿದು ನಿಲ್ಲಿಸಿರುವುದು, ಶಾರುಖ್ ಅವರೊಂದಿಗೆ ವಾಗ್ವಾದಕ್ಕಿಳಿದಿರುವ ದೃಶ್ಯಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ.

ಅಂಥದ್ದೇನಾಯ್ತು?
ಇದು ಶಾರುಖ್ ಹೊಸ ಸಿನಿಮಾದ ಶೂಟಿಂಗ್ ದೃಶ್ಯ ಅಷ್ಟೇ. ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರ ನಿರ್ದೇಶಿಸಿದ್ದ ಮನೀಶ್ ಶರ್ಮಾರ ಹೊಸ ಚಿತ್ರ ‘ಫ್ಯಾನ್’ ಶೂಟಿಂಗ್ ನಡೆದದ್ದು ಶಾರುಖ್ ಬಂಗ್ಲೆ ‘ಮನ್ನತ್’ ಮುಂದೆ. ಪ್ರಸ್ತುತ ದೃಶ್ಯದಲ್ಲಿ ಸೂಪರ್ಸ್ಟಾರ್ ನಟನೊಬ್ಬನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ಸಲುವಾಗಿ ಅವರ ಮನೆಗೆ ಪ್ರವೇಶಿಸುವ ಅಭಿಮಾನಿಯೊಬ್ಬನ ಪಾತ್ರವನ್ನು ಶಾರುಖ್ ಅಭಿನಯಿಸುತ್ತಿದ್ದಾರೆ. ಆ ಸೂಪರ್ ಸ್ಟಾರ್ ನಟನ ಮನೆಯ ಸೆಕ್ಯೂರಿಟಿಗಳು ಆ ಅಭಿಮಾನಿಯನ್ನು ತಡೆಯುತ್ತಿರುವ ದೃಶ್ಯದ ಶೂಟಿಂಗ್ ಅಲ್ಲಿ ನಡೆದಿತ್ತು.

fan-movie

shah-rukh-khan-caught

shah-rukh-khan-fan

shah-rukh-khan-fan-mov

shah-rukh-khan-filming

shah-rukh-khan-house

shah-rukh-khan-manant

shah-rukh-khan-mov

shah-rukh-khan-movie

shah-rukh-khan-police

shah-rukh-khan-shoot

shah-rukh-khan-shooting

srk_35

srk-fan

ಸಿಂಪಲ್ ಚೆಕ್ ಶರ್ಟ್ ಹಾಗೂ ಜೀನ್ಸ್ ಧರಿಸಿದ ಶಾರುಖ್ ಖಾನ್ ಸೆಕ್ಯೂರಿಟಿ ಜತೆ ಜಗಳವಾಡುತ್ತಿರುವ ದೃಶ್ಯವಾಗಿತ್ತು ಅದು. ಶೂಟಿಂಗ್ ವೀಕ್ಷಿಸಲು ಶಾರುಖ್ ನ ಪುಟ್ಟ ಮಗ ಅಬ್ರಾಮ್ ಕೂಡಾ ಅಜ್ಜಿ ಜತೆ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು.

ಸದ್ಯ ಶಾರುಖ್ ಖಾನ್ ‘ಫ್ಯಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರ ಮುಂದಿನ ವರ್ಷ ಆಗಸ್ಟ್ 14ರಂದು ತೆರೆಕಾಣಲಿದೆ. ಆದಾಗ್ಯೂ, ಈ ಚಿತ್ರದ ಹೀರೋಯಿನ್ ಯಾರು ಎಂಬುದು ಇಲ್ಲಿಯವರೆಗೆ ತೀರ್ಮಾನವಾಗಿಲ್ಲ.

Write A Comment