ಮನೋರಂಜನೆ

ಕಿಚ್ಚ ಸುದೀಪ್ ನಟನೆ ನನಗೆ ಇಷ್ಟ: ಮೆಚ್ಚುಗೆ ವ್ಯಕ್ತಪಡಿಸಿದ ಅಜಯ್ ದೇವ್‌ಗನ್

Pinterest LinkedIn Tumblr

Facebook Timeline banners

ಮುಂಬೈ: ನನಗೆ ಸುದೀಪ್ ನಟನೆ ಇಷ್ಟ, ‘ಆಕ್ಷನ್ ಜಾಕ್ಸನ್‌’ ಚಿತ್ರದಲ್ಲಿ ಅವರಿಗೊಂದು ಪಾತ್ರ ಕೊಡಬಹುದೆ? ಎಂದು ನಾನು ಪ್ರಭುದೇವ ಅವರಲ್ಲಿ ಕೇಳಿದ್ದೆ. ದುರದೃಷ್ಟವಶಾತ್, ಅದು ನೆರವೇರಲಿಲ್ಲ ಎಂದು ಬಾಲಿವುಡ್ ನಟ ಅಜಯ್ ದೇವ್‌ಗನ್ ಹೇಳಿದ್ದಾರೆ.

ಆಕ್ಷನ್ ಜಾಕ್ಸನ್‌ ಚಿತ್ರ ನಿನ್ನೆ ತೆರೆ ಕಂಡಿತ್ತು. ‘ಈಗ’ ಚಿತ್ರದ ಹಿಂದಿ ಅವತರಣಿಕೆ ‘ಮಕ್ಕಿ’ ಚಿತ್ರದಲ್ಲಿ ಸುದೀಪ್ ಅಭಿನಯ ನೋಡಿ ನಾನು ಇಂಪ್ರೆಸ್ ಆಗಿದ್ದೇನೆ. ಅವರೊಂದಿಗೆ ಹಿಂದಿ ಚಿತ್ರವೊಂದರಲ್ಲಿ ನಟಿಸಬೇಕೆಂಬ ಬಯಕೆ ಹುಟ್ಟಿಕೊಂಡಿದ್ದು ಆಗಲೇ ಎಂದು ಅಜಯ್ ಹೇಳಿದ್ದಾರೆ.

ಅದೇ ವೇಳೆ ಕೊರಿಯೋಗ್ರಾಫರ್ ರವಿ ವರ್ಮ ಬಗ್ಗೆಯೂ ಪ್ರಭುದೇವ ಮತ್ತು ಅಜಯ್ ದೇವ್‌ಗನ್ ಮೆಚ್ಚುಗೆ ಸೂಚಿಸಿದ್ದಾರೆ. ರವಿ ಒಳ್ಳೆಯ ಕೊರಿಯೋಗ್ರಾಫರ್. ಪ್ರಭು ಮತ್ತು ರವಿಯವರ ಕಾಂಬಿನೇಷನ್‌ನಿಂದ ಒಳ್ಳೆಯ ನೃತ್ಯಗಳು ಸಿನಿಮಾದಲ್ಲಿ ಮೂಡಿಬಂದಿವೆ ಎಂದು ಅಜಯ್ ಅಭಿಪ್ರಾಯಪಟ್ಟಿದ್ದಾರೆ.

ಏನೇ ಆಗಲಿ, ಸ್ಯಾಂಡಲ್‌ವುಡ್ ಬಗ್ಗೆ ಬಾಲಿವುಡ್‌ನ ಹೀರೋ ಮೆಚ್ಚುಗೆ ಸೂಚಿಸುತ್ತಿರುವುದು ಒಂದೊಳ್ಳೆಯ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂಬುದಂತೂ ನಿಜ.

Write A Comment