ಮನೋರಂಜನೆ

ಮಕಾವು ಓಪನ್: ಸಿಂಧು ಸೆಮಿಫೈನಲ್‌ಗೆ ಪ್ರವೇಶ

Pinterest LinkedIn Tumblr

sindhu-getty2811-630

ಮಕಾವು, ನ.28: ಮಕಾವು ಓಪನ್ ಗ್ರಾನ್‌ಪ್ರಿ ಗೋಲ್ಡ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಹಾಲಿ ಚಾಂಪಿಯನ್ ಭಾರತದ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.11ನೆ ಆಟಗಾರ್ತಿ ಸಿಂಧು ಚೀನಾದ ಐದನೆ ಶ್ರೇಯಾಂಕಿತೆ ಹ್ಯಾನ್ ಲಿ ವಿರುದ್ಧ 21-17, 19-21, 21-16 ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ದ್ವಿತೀಯ ಶ್ರೇಯಾಂಕಿತೆ ಸಿಂಧು ಮುಂದಿನ ಸುತ್ತಿನಲ್ಲಿ ಕೆನಡಾದ ಮಿಚೆಲ್ ಲಿ ಅಥವಾ ಥಾಯ್ಲೆಂಡ್‌ನ ಬುಸನನ್ ಒಂಗ್‌ಬುಮ್‌ರಂಗಪನ್‌ರನ್ನು ಎದುರಿಸಲಿದ್ದಾರೆ.

ಆರಂಭದಲ್ಲೇ 5-1 ಮುನ್ನಡೆ ಸಾಧಿಸಿದ ಸಿಂಧು ಮೊದಲ ಪಂದ್ಯವನ್ನು 21-17 ರಿಂದ ಗೆದ್ದುಕೊಂಡರು. ಎರಡನೆ ಗೇಮ್‌ನಲ್ಲಿ ಸಿಂಧು ಆರಂಭದಲ್ಲಿ 11-6 ರಿಂದ ಲೀಡ್ ಪಡೆದಿದ್ದರು. ಆದರೆ, ತಿರುಗೇಟು ನೀಡಿದ ಚೀನದ ಆಟಗಾರ್ತಿ ಎರಡನೆ ಸೆಟನ್ನು 21-19ರಿಂದ ಗೆದ್ದುಕೊಂಡರು.
ಮೂರನೆ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸಿಂಧು 21-16 ಸೆಟ್‌ಗಳಿಂದ ಗೆಲುವು ಸಾಧಿಸಿ ಪಂದ್ಯವನ್ನು ಗೆದ್ದುಕೊಂಡರು.

Write A Comment