ಮನೋರಂಜನೆ

ಪೋಕರಿ ‘ಮದುಮಗಳು’ ಈ ಸೋನಂ!

Pinterest LinkedIn Tumblr

sonam_kapoor

ಬಾಲಿವುಡ್‌ನಲ್ಲಿ ನಾನು ಬೇರೆ ನನ್ನ ಸ್ಟೈಲೇ ಬೇರೆ ಎಂದು ಮಿಂಚುತ್ತಿರುವ ನಾಯಕಿಯರಲ್ಲಿ ಸೋನಂ ಕಪೂರ್ ಕೂಡಾ ಒಬ್ಬಳು. ತಾನು ತೊಡುವ ಡ್ರೆಸ್‌ನಲ್ಲಾಗಿರಲಿ, ಹಾಕುವ ಚಪ್ಪಲಿಗಳಲ್ಲಾಗಿರಲಿ ಎಲ್ಲವೂ ವಿಶಿಷ್ಟ ರೀತಿಯಲ್ಲಿರಬೇಕು ಎಂಬ ಹಠ ಈಕೆಗೆ. ಫ್ಯಾಷನ್‌ನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಅದನ್ನು ಹೇಗೆ ಪ್ರದರ್ಶಿಸಬೇಕೆಂದು ಈ ಹುಡುಗಿಗೆ ಹೇಳಿ ಕೊಡಬೇಕಾಗಿಲ್ಲ.

ಅಂದ ಹಾಗೆ ಅನಿಲ್ ಕಪೂರ್ ಪುತ್ರಿ ಸೋನಂ ಈಗ ಮದುವಣಗಿತ್ತಿಯಾಗಲು ರೆಡಿಯಾಗಿದ್ದಾಳೆ. ಇಷ್ಟು ಬೇಗ ಮದ್ವೆ ಆಗ್ತಿದ್ದಾಳಾ? ಎಂದು ಗಾಬರಿಯಾಗಬೇಡಿ.

ನಿಜ ಜೀವನದಲ್ಲಿ ಅಲ್ಲ ಮಾರಾಯ್ರೆ…ಡೋಲಿ ಕೀ ಡೋಲಿ ಎಂಬ ಸಿನಿಮಾದಲ್ಲಿ.

ಪ್ರಸ್ತುತ ಸಿನಿಮಾದ ಟೀಸರ್ ಗುರುವಾರ ಬಿಡುಗಡೆಯಾಗಿದ್ದು, ಸೋನಂ ಕಪೂರ್ ಹೊಸ ಲುಕ್‌ನಲ್ಲಿರುವ ಪೋಸ್ಟರ್ ಗಮನ ಸೆಳೆದಿದೆ. ಅದರಲ್ಲಿ ಸೋನಂ ಅನಿತಾ ದೋಂಗ್ರೇ ಡಿಸೈನ್ ಮಾಡಿದ ಲೆಹೆಂಗಾ ತೊಟ್ಟು, ಲೆದರ್ ಜಾಕೆಟ್, ಶೂ ಧರಿಸಿ ಒಂಥರಾ ಪೋಕರಿ ಮದುವಣಗಿತ್ತಿಯಾಗಿ ಪೋಸ್  ಕೊಟ್ಟಿದ್ದಾರೆ.

‘ಡೋಲಿ ಕೀ ಡೋಲಿ’ ಸಿನಿಮಾದಲ್ಲಿ ಮದುವಣಗಿತ್ತಿಯಾಗಿರುವ ಸೋನಂ ತೋಳಲ್ಲಿ ‘ಡೋಲಿ’ ಎಂಬ ಟ್ಯಾಟೂ ಕೂಡಾ ಇದೆ.

ಅಭಿಷೇಕ್ ದೋಗ್ರಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿರುವ ‘ಡೋಲಿ…’ಯಲ್ಲಿ ಪುಲ್ಕಿತ್ ಸಮರ್ಥ್, ರಾಜ್ ಕುಮಾರ್ ರಾವ್, ವರುಣ್ ಶರ್ಮಾ ಮೊದಲಾದವರು ತಾರಾಗಣದಲ್ಲಿದ್ದಾರೆ.

ಅರ್ಬಾಜ್ ಖಾನ್ ನಿರ್ಮಾಣದ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಸ್ಪೆಷಲ್ ಅಪಿಯರೆನ್ಸ್ ನೀಡಲಿದ್ದು, ಮಲೈಕಾ ಅರೋರಾ ಖಾನ್ ಐಟಂ ಡ್ಯಾನ್ಸ್ ನಲ್ಲಿ ಸೊಂಟ ಬಳುಕಿಸಲಿದ್ದಾರೆ.

Write A Comment