ಮನೋರಂಜನೆ

ಹ್ಯಾಮಿಲ್ಟನ್ ಮುಡಿಗೆ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ಗರಿ: ಎರಡನೇ ಬಾರಿಗೆ ಫಾರ್ಮುಲ್ 1 ಪ್ರಶಸ್ತಿ ಗೆದ್ದ ಮರ್ಸಿಡೀಸ್

Pinterest LinkedIn Tumblr

hamilton

ಅಬುಧಾಬಿ: ಫಾರ್ಮುಲಾ 1 ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

29 ವರ್ಷದ ಬ್ರಿಟನ್ ಮೂಲದ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅಬುಧಾಬಿ ಗೆಲುವಿನ ಮೂಲಕ ಫಾರ್ಮುಲಾ 1ನಲ್ಲಿ ಎರಡನೇ ಬಾರಿ ಪ್ರಶಸ್ತಿಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗಳಿಸಿದ್ದ ಹ್ಯಾಮಿಲ್ಟನ್ ಆ ಬಳಿಕ ಸುಮಾರು 11 ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ. ಆ ಮೂಲಕ ತಮ್ಮ ಖಾತೆಯ ಒಟ್ಟು ಅಂಕಗಳನ್ನು 384ಕ್ಕೆ ಏರಿಸಿಕೊಂಡಿದ್ದಾರೆ.

ಹ್ಯಾಮಿಲ್ಟನ್ ಪ್ರತಿನಿಧಿಸಿದ ಮರ್ಸಿಡೀಸ್ ತಂಡದವರೇ ಆದ ನಿಕೋ ರೋಸ್‌ಬರ್ಗ್ ಅವರ ಕಾರಿನಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದ್ದರಿಂದ ಅವರು 14ನೇಯವರಾಗಿ ರೇಸ್ ಪೂರ್ಣಗೊಳಿಸಬೇಕಾಯಿತು. ಈ ಹಿಂದಿನ ಪರೀಕ್ಷಾ ಚಾಲನೆಯಲ್ಲಿ ರೋಸ್ ಬರ್ಗ್ ಅವರು ಹ್ಯಾಮಿಲ್ಟನ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನಗಳಿಸಿದ್ದರು. ಇನ್ನು ಹ್ಯಾಮಿಲ್ಟನ್‌ಗೆ ತೀವ್ರ ಪ್ರತಿರೋಧ ತೋರಿದ ಈ ವರ್ಷದ ಯಶಸ್ವಿ ಚಾಲಕನೆಂಬ ಖ್ಯಾತಿ ಗಳಿಸಿದ ಸೆಬಾಸ್ಟಿಯನ್ ವೆಟ್ಟಲ್ ಅವರು ನಾಲ್ಕನೆಯವರಾಗಿ ಗುರಿ ಮುಟ್ಟಿದರು. ರೇಸ್ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೂಯಿಸ್ ಹ್ಯಾಮಿಲ್ಟನ್ ಅವರು, ‘ಇದು ನನ್ನ ಜೀವನದ ಅತ್ಯಂತ ದಿನ’ ಎಂದು ಹರ್ಷ ವ್ಯಕ್ತಪಡಿಸಿದರು.

ಅಬುಧಾಮಿ ಗ್ರ್ಯಾಂಡ್ ಪ್ರಿಕ್ಸ್ ಗೆಲುವಿನ ಬಳಿಕ ಎರಡನೇ ಬಾರಿಗೆ ಫಾರ್ಮುಲಾ ಒನ್ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದ್ದು, ಈ ಹಿಂದೆ ಫರ್ನಾಂಡೋ ಆಲಾನ್ಸೋ ಮತ್ತು ದಂತಕಥೆ ಮೈಕೆಲ್ ಶೂಮಾಕರ್ ಅವರು ಈ ಸಾಧನೆ ಮಾಡಿದ್ದರು. ಫಾರ್ಮುಲಾ ಒನ್ ದಂತಕತೆ ಶೂಮಾಕರ್ ಅವರು ಒಟ್ಟು 7 ಬಾರಿ ಫಾರ್ಮುಲಾ ಒನ್ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದ್ದು, ಇದು ಈ ವರೆಗಿನ ದಾಖಲೆಯಾಗಿದೆ.

Write A Comment