ಮನೋರಂಜನೆ

ವಿಶ್ವ ಚೆಸ್ ಚಾಂಪಿಯನ್‌ಷಿಪ್: ಪ್ರಶಸ್ತಿ ಉಳಿಸಿಕೊಂಡ ಕಾರ್ಲ್‌ಸನ್; ಆನಂದ್‌ಗೆ ಸೋಲು

Pinterest LinkedIn Tumblr

karlson

ಸೋಚಿ(ರಶ್ಯ), ನ.23: ಭಾರತದ ವಿಶ್ವನಾಥನ್ ಆನಂದ್‌ರನ್ನು ಮಣಿಸಿದ ನಾರ್ವೆಯ ಮ್ಯಾಗ್ನೆಸ್ ಕಾರ್ಲ್‌ಸನ್ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೆ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ರವಿವಾರ ಇಲ್ಲಿ ನಡೆದ 11ನೆ ಪಂದ್ಯದಲ್ಲಿ ತನ್ನ ಫೇವರಿಟ್ ಬಿಳಿ ಕಾಯಿಯೊಂದಿಗೆ ಆಡಿದ ಕಾರ್ಲ್‌ಸನ್ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಆನಂದ್‌ರನ್ನು 6.5-4.5 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು. ಕಾರ್ಲ್‌ಸನ್ ಕಳೆದ ವರ್ಷ ಚೆನ್ನೈನಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿಯ ಚಾಂಪಿ ಯನ್ ಆನಂದ್‌ರನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದರು.

Write A Comment