ಮನೋರಂಜನೆ

ಟ್ವೀಟರ್‌ನಲ್ಲಿ ಮಹಿಳೆ ದೌರ್ಜನ್ಯಕ್ಕೊಳಗಾದರೆ WAM ನಲ್ಲಿ ದೂರು ನೀಡಿ

Pinterest LinkedIn Tumblr

twitter-wam

ಮನೆ, ಕಚೇರಿ,ಬಸ್ಸು, ರಸ್ತೆ ಮಾತ್ರವಲ್ಲ ಸಾಮಾಜಿಕ ತಾಣದಲ್ಲಿಯೂ ಮಹಿಳೆ ದೌರ್ಜನ್ಯಕ್ಕೊ ಳಗಾಗುತ್ತಾಳೆ. ಆನ್‌ಲೈನ್‌ನಲ್ಲಿ ಕೆಟ್ಟ ಪದಗಳನ್ನು ಬಳಸಿ ಇಲ್ಲವೇ ಅಶ್ಲೀಲ ಫೋಟೋಗಳನ್ನು ಅಪ್‌ಲೋಡ್ ಮಾಡಿ ಆಕೆಯ ಮಾನಹಾನಿ ಮಾಡುವ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂಥಾ ಸಮಸ್ಯೆಗಳಲ್ಲಿ ಸಿಲುಕಿರುವ ಮಹಿಳೆಯರ ರಕ್ಷಣೆಗಾಗಿ ಇದೀಗ ಟ್ವೀಟರ್ ಕಣಕ್ಕಿಳಿದೆ. ಟ್ವೀಟರ್‌ನಲ್ಲಿ ಯಾವುದಾದರೂ ಮಹಿಳೆ ಕಿರುಕುಳಕ್ಕೊಳಗಾದರೆ, ಇನ್ಮುಂದೆ ಅವರ ಸಹಾಯಕ್ಕೆ WAM ಬರಲಿದೆ.

ವುಮೆನ್ , ಆ್ಯಕ್ಷನ್ ಆ್ಯಂಡ್ ಮೀಡಿಯಾ (WAM) ಎಂಬ ಆದಾಯ ರಹಿತ ಮಹಿಳಾ ಸಂಘಟನೆಯೊಂದಿಗೆ ಟ್ವೀಟರ್ ಸಹಭಾಗಿತ್ವ ಹೊಂದಿದ್ದು, WAM Twitter Harassment Reporting Tool  ಮುಖಾಂತರ ದೂರು ಸಲ್ಲಿಸಬಹುದಾಗಿದೆ.

ಟ್ವೀಟರ್ ಬಳಕೆದಾರರಾಗಿರುವ 18 -24ರ ವಯಸ್ಸಿನ ಮಹಿಳೆಯರಲ್ಲಿ ಶೇ.30ರಷ್ಟು ಮಂದಿ ಆನ್‌ಲೈನ್‌ನಲ್ಲಿ ಕಿರುಕುಳಕ್ಕೊಳಗಾಗುತ್ತಾರೆ. ಟ್ವೀಟರ್‌ನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಸಲುವಾಗಿ ಮತ್ತು ಅವರು ನಿರ್ಭಯವಾಗಿ ಸಾಮಾಜಿಕತಾಣದಲ್ಲಿ ಬೆರೆಯುವಂತಾಗಲು  ನಾವು ಈ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು WAM ಎಕ್ಸಿಕ್ಯೂಟಿವ್ ಡೈರೆಕ್ಟರ್ , ಜಾಕ್ಲೀನ್ ಫ್ರೈಡ್‌ಮ್ಯಾನ್ ಹೇಳಿದ್ದಾರೆ.

ಸಾಮಾಜಿಕ ತಾಣದಲ್ಲಿ ಮಹಿಳೆಯರ ವಿರುದ್ಧ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆ, ಆನ್‌ಲೈನ್ ಮೂಲಕ ಬೆನ್ನಟ್ಟುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಆನ್‌ಲೈನ್‌ನಲ್ಲಿ ಮಹಿಳೆಯ ಮೇಲೆ ನಡೆಯುವ ಇಂಥಾ ದೌರ್ಜನ್ಯಗಳ ವಿರುದ್ಧ ತಕ್ಷಣವೇ ದೂರು ನೀಡುವುದಕ್ಕಾಗಿ ಟ್ವೀಟರ್ WAM ಸಹಾಯದಿಂದ ಹೊಸ ಫೀಚರ್ ಅಳವಡಿಸಿಕೊಂಡಿದೆ.

ಟ್ವೀಟರ್ ಮೂಲಕ ಯಾರಾದರೂ ನಿಂದಿಸಿದರೆ, ಬೈದರೆ, ಕಿರುಕುಳ ನೀಡಿದರೆ ಮಹಿಳೆಯರು ನಿರ್ಭಯದಿಂದ ಇಲ್ಲಿ ದೂರು ದಾಖಲಿಸಬಹುದಾಗಿದೆ.

ಮಹಿಳೆಯರ ಸಮಸ್ಯೆಯನ್ನು WAM ಆಲಿಸಿ ಅದನ್ನು ಟ್ವೀಟರ್ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಾಗುತ್ತದೆ. ಈ ಹೊಸ ಟೂಲ್ ಮೂಲಕ ಟ್ವೀಟರ್ ಕೂಡಾ ಮಹಿಳೆಯರ ರಕ್ಷಣೆಗೆ ಕೈಜೋಡಿಸಿದ್ದು, ಇನ್ಮುಂದೆ ಟ್ವೀಟರ್‌ನಲ್ಲಿ ಮಹಿಳೆಯರು ನಿಶ್ಚಿಂತರಾಗಿರಬಹುದು.

Write A Comment