ಮುಂಬೈ

ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ಮಹಿಳೆಯೊಬ್ಬರಿಗೆ 8 ಲಕ್ಷ ರೂ. ದಂಡ!

Pinterest LinkedIn Tumblr

ಮುಂಬೈ: ಮುಂಬೈನ ಕಾಂಪ್ಲೆಕ್ಸ್‌ ಒಂದರಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕಿದವರಿಗೆ ಲಕ್ಷ ಲಕ್ಷ ರೂ. ದಂಡ ಹಾಕಲಾಗಿದೆ.

(ಸಾಂದರ್ಭಿಕ ಚಿತ್ರ)

ನವಿ ಮುಂಬೈನ ಎನ್‌ಆರ್‌ಐ ಕಾಂಪ್ಲೆಕ್ಸ್‌ನಲ್ಲಿ ಸುಮಾರು 40 ಬಿಲ್ಡಿಂಗ್‌ಗಳಿದ್ದು, ನೂರಾರು ಅಪಾರ್ಟ್‌ಮೆಂಟ್‌ ಗಳಿವೆ. ಈ ಕಾಂಪ್ಲೆಕ್ಸ್‌ ಆವರಣದಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಒಂದು ದಿನಕ್ಕೆ 5000 ರೂ. ದಂಡ ವಿಧಿಸಲಾಗುತ್ತಿದೆ.

ಇಲ್ಲಿನ ನಿವಾಸಿ ಅಂಶು ಸಿಂಗ್‌ ಎಂಬ ಮಹಿಳೆ 2021ರ ಜುಲೈನಿಂದ ಪ್ರತಿದಿನ ಬೀದಿನಾಯಿಗಳಿಗೆ ಅನ್ನ ಹಾಕುತ್ತಿದ್ದರು. ಹೀಗಾಗಿ ಅವರಿಗೆ 8 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆ ಅದೇ ಕಾಂಪ್ಲೆಕ್ಸ್‌ನ ಮತ್ತೊಬ್ಬ ಮಹಿಳೆ ಲೀನಾ ವರ್ಮಾ ಅವರಿಗೆ 6 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.